alex Certify ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಇಲ್ಲಿದೆ ಟಿಪ್ಸ್

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕಾಗುತ್ತದೆ.

ಮಳೆಗಾಲದಲ್ಲಿ ಇವುಗಳಿಂದ ದೂರವಿರಿ

ಎಲೆಕೋಸು ಮತ್ತು ಪಾಲಕ್: ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ದುರ್ಬಲವಾಗಿರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಎಲೆಕೋಸು ಹಾಗೂ ಪಾಲಾಕ್ ಸೊಪ್ಪುಗಳು ಮಳೆಗಾಲದಲ್ಲಿ ಒಳ್ಳೆಯದಲ್ಲ. ಅದ್ರಲ್ಲಿ ಸಣ್ಣ ಕೀಟಾಣು ಹಾಗೂ ಮೊಟ್ಟೆಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅದೂ ನಮ್ಮ ಹೊಟ್ಟೆಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಇದನ್ನು ಸೇವಿಸಲು ಇಷ್ಟಪಟ್ಟಿದ್ದರೆ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಉಪಯೋಗಿಸಿ.

ಆಲೂಗಡ್ಡೆ ಮತ್ತು ಮುಂಗಾರು ಬೆಳೆ: ಆಲೂಗಡ್ಡೆ, ಬೆಂಡೆಕಾಯಿ, ಅವರೆ ಕಾಳು, ಹೂ ಕೋಸು ಈ ತರಕಾರಿಗಳನ್ನು ಸೇವಿಸದೆ ಇರುವುದೇ ಒಳ್ಳೆಯದು. ಇದು ಆರಾಮವಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಇದರ ಸೇವನೆಯಿಂದ ದೂರ ಇರುವುದು ಒಳ್ಳೆಯದು.

ಹಸಿ ತರಕಾರಿ ಹಾಗೂ ಪಾನೀಯ : ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನುವುದು ಒಳ್ಳೆಯದಲ್ಲ. ಎಲ್ಲ ತರಕಾರಿಗಳನ್ನು ಬೇಯಿಸಿ ತಿನ್ನಿರಿ. ಬೇಯಿಸಿದಾಗ ಕೀಟಾಣುಗಳು ನಾಶವಾಗುತ್ತವೆ. ಮನೆಯಲ್ಲಿ ಕೂಡ ತರಕಾರಿಯನ್ನು ಕಟ್ ಮಾಡಿ ತುಂಬಾ ಸಮಯ ಬಿಡಬೇಡಿ. ತಕ್ಷಣ ತಿನ್ನುವುದು ಉತ್ತಮ.

ಅಣಬೆ: ಮಳೆಗಾಲದಲ್ಲಿ ಅಣಬೆ ತಿನ್ನುವುದು ಒಳ್ಳೆಯದಲ್ಲ. ಇದರಿಂದ ಸೋಂಕು ತಗಲುವ ಅಪಾಯವಿರುತ್ತದೆ. ಉಳಿದ ಕಾಲಕ್ಕಿಂತ ಮಳೆಗಾಲದಲ್ಲಿ ಈ ಪ್ರಮಾಣ ಜಾಸ್ತಿ ಇರುತ್ತದೆ.

ಹೊರಗಿನ ತಿಂಡಿ: ಹೊರಗಿನ ತಿಂಡಿ ಯಾವ ಸಮಯದಲ್ಲಿಯೂ ಒಳ್ಳೆಯದಲ್ಲ. ಮಳೆಗಾಲದಲ್ಲಂತೂ ಇದರ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಎಣ್ಣೆ ಹಾಗೂ ನೀರು ಶುದ್ಧವಾಗಿರದ ಕಾರಣ ನಾನಾ ಖಾಯಿಲೆಗಳು ಕಾಡುತ್ತವೆ.

ಮಳೆಗಾಲದಲ್ಲಿ ಇವು ಬೆಸ್ಟ್

ತುಳಸಿ: ಪ್ರತಿದಿನ ಮೂರ್ನಾಲ್ಕು ತುಳಸಿ ಎಲೆಗಳ ಸೇವನೆ ಬಹಳ ಒಳ್ಳೆಯದು. ತುಳಸಿಯಲ್ಲಿ ವೈರಸ್ ನಿರೋಧಕ ಶಕ್ತಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಸಲಾಡ್ ನಲ್ಲಿ ಎರಡು ಮೂರು ತುಳಸಿ ಎಲೆ ಹಾಕಿದರೆ ಉತ್ತಮ. ತುಳಸಿ ಎಲೆಯನ್ನು ಪ್ರತಿದಿನ ಹಾಗೆ ಕೂಡ ತಿನ್ನಬಹುದು.

ಹರ್ಬಲ್ ಚಹಾ: ಮಳೆಗಾಲದಲ್ಲಿ ಹರ್ಬಲ್ ಚಹಾ ಆರೋಗ್ಯಕ್ಕೆ ಉತ್ತಮ. ನಿಮಗೆ ಇಷ್ಟವಾದ್ರೆ ಶುಂಠಿ, ಮೆಣಸು ಮತ್ತು ಜೇನನ್ನು ಕೂಡ ಹಾಕಿಕೊಂಡು ಟೀ ಕುಡಿಯಬಹುದು.

ಒಣ ಹಣ್ಣುಗಳು: ಒಣ ಹಣ್ಣುಗಳಲ್ಲಿ ವಿಟಮಿನ್ ಇ ಮತ್ತು ಸತುವಿನ ಅಂಶ ಜಾಸ್ತಿಯಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಮುಷ್ಠಿಯಷ್ಟು ವಿವಿಧ ಒಣ ಹಣ್ಣುಗಳನ್ನು ಸೇವಿಸಿ.

ಬೆಳ್ಳುಳ್ಳಿ: ಮಳೆಗಾಲದಲ್ಲಿ ಬೆಳ್ಳುಳ್ಳಿ ಬಹಳ ಒಳ್ಳೆಯದು. ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ. ಮಳೆಗಾಲದಲ್ಲಿ ಬಿಸಿ ಬಿಸಿ ಪಾನೀಯ ಸೇವಿಸಲು ಮನಸ್ಸು ಬಯಸುತ್ತದೆ. ಹಾಗಾಗಿ ಉಳಿದ ಸೂಪ್ ಜೊತೆ ಬೆಳ್ಳುಳ್ಳಿ ಸೇವನೆ ಮಾಡಬೇಕು. ಹಾಗೆ ಸಾಂಬಾರ್, ಪಲ್ಲೆ ಸೇರಿದಂತೆ ಬೇಯಿಸಿದ ಮಸಾಲೆ ಆಹಾರಗಳಿಗೆ ಬೆಳ್ಳುಳ್ಳಿ ಹಾಕಿದರೆ ಒಳ್ಳೆಯದು.

ಹಾಗಲಕಾಯಿ, ಲಿಂಬು ಮತ್ತು ಮೆಂತ್ಯ: ಸ್ವಲ್ಪ ಕಹಿ ಹಾಗೂ ಹುಳಿ ಮಿಶ್ರಿತ ಈ ಆಹಾರ ಸೇವನೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...