alex Certify ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ.

ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ಅಷ್ಟಕ್ಕೂ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಏನು ಕೊಡಬಹುದು ಅನ್ನೋ ವಿವರ ಇಲ್ಲಿದೆ.

* ಮಕ್ಕಳಿಗೆ ಓಟ್ಸ್ ನೀಡಬಹುದು. ಓಟ್ಸ್ ಜೊತೆಗೆ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ. ಅದರ ಜೊತೆಗೆ ಜೇನನ್ನು ಸೇರಿಸಿ ನೀಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಆರೋಗ್ಯಕಾರಿಯೂ ಹೌದು.

* ಗೋಧಿಯಿಂದ ಮಾಡಿದ ಉಪಹಾರ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್ ಇ ಮತ್ತು ಇತರೆ ಅಗತ್ಯ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹಿಮೋಗ್ಲೋಬಿನ್ ಹೆಚ್ಚಿಸಿ, ಲವಲವಿಕೆಯಿಂದ ಇರಲು ಸಹಕರಿಸುತ್ತದೆ.

* ಬಾಳೆಹಣ್ಣು ಮತ್ತು ಇತರ ಹಣ್ಣುಗಳ ಸ್ಮೂತಿ ಮಾಡಿಕೊಟ್ಟರೂ ಮಕ್ಕಳ ಹೊಟ್ಟೆ ತುಂಬುತ್ತದೆ. ಬೇಡವೆನ್ನದೆ ಖುಷಿಯಾಗಿ ಸೇವಿಸುತ್ತಾರೆ.

* ಕಲ್ಲಂಗಡಿ ಹಣ್ಣುಗಳನ್ನು ಬೆಳಗ್ಗೆ ಮಕ್ಕಳಿಗೆ ನೀಡಿದರೆ ದೇಹದ ನೀರಿನಾಂಶವನ್ನು ಹೆಚ್ಚಿಸುತ್ತದೆ. ಕಲ್ಲಂಗಡಿಯಲ್ಲಿನ ಲಿಕೊಪೀನ್ ಹೃದಯ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ.

* ಬ್ರೌನ್ ಬ್ರೆಡ್ ಮತ್ತು ಮೊಟ್ಟೆ ಆಮ್ಲೆಟ್ ಒಳ್ಳೆಯದು. ದಿನಕ್ಕೊಂದು ಮೊಟ್ಟೆಯನ್ನು ಮಕ್ಕಳು ಸೇವಿಸಿದರೆ, ಎಲುಬು ಸ್ಟ್ರಾಂಗ್ ಆಗುತ್ತದೆ.

* ಬಾಳೆಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ, ಪೊಟ್ಯಾಷಿಯಂ, ನಾರು ಮತ್ತು ಮೆಗ್ನೀಷಿಯಂ ಇವೆ. ಬೆಳಗ್ಗೆ ಒಂದು ಬಾಳೆ ಹಣ್ಣು ಮತ್ತು ಒಂದು ಲೋಟ ಹಾಲು ಸೇವಿಸಿದರೆ ಮಧ್ಯಾಹ್ನದವರೆಗೆ ಹೊಟ್ಟೆ ಹಸಿಯುವುದಿಲ್ಲ.

* ವೆಜ್ ರೋಲ್ ಮಾಡಿ ಕೊಡಿ. ಚಪಾತಿ ಜೊತೆ ಬೇರೆ ಬೇರೆ ರೀತಿಯ ಹಸಿ ತರಕಾರಿಗಳನ್ನು ಸೇರಿಸಿ, ಅದರ ಮೇಲೆ ಟೊಮೇಟೊ ಕೆಚಪ್ ಹಾಕಿ ನೀಡಿದರೆ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...