alex Certify ‘ಫ್ರೂಟ್ ಸಲಾಡ್’ ಫ್ರೆಶ್ ಆಗಿರಲು ಈ ಟಿಪ್ಸ್ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫ್ರೂಟ್ ಸಲಾಡ್’ ಫ್ರೆಶ್ ಆಗಿರಲು ಈ ಟಿಪ್ಸ್ ಅನುಸರಿಸಿ

ಮನೆಯಲ್ಲಿ ಮಾಡುವ ಫ್ರೂಟ್ ಸಲಾಡ್ ಬೇಗನೆ ಫ್ರೆಶ್ ನೆಸ್ ಕಳೆದುಕೊಂಡು ಹಣ್ಣುಗಳೆಲ್ಲ ಕಂದು ಬಣ್ಣವಾಗುತ್ತದೆ. ಅದನ್ನು ಆಗಲೇ ಸೇವಿಸದಿದ್ದರೆ ಕೆಲವೊಮ್ಮೆ ಅದರ ರುಚಿಯೇ ಬೇರೆಯಾಗುತ್ತದೆ. ಫ್ರೂಟ್ ಸಲಾಡ್ ನ ಫ್ರೆಶ್ ನೆಸ್ ಕಾಪಾಡಲು ಇಲ್ಲಿದೆ ಕೆಲವು ಉಪಾಯ.

* ಫ್ರೂಟ್ ಸಲಾಡ್ ಗೆ ಬಳಸುವ ಹಣ್ಣುಗಳನ್ನು ಹಿಂದಿನ ರಾತ್ರಿಯೇ ಕತ್ತರಿಸಿ ಇಡಬೇಡಿ. ಈ ಹಣ್ಣುಗಳ ಹೋಳುಗಳು ಗಾಳಿಯ ಸಂಪರ್ಕಕ್ಕೆ ಬಂದು ಬೇಗನೆ ಕಂದುಬಣ್ಣಕ್ಕೆ ತಿರುಗುತ್ತವೆ.

* ಈ ಸಲಾಡ್ ಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಬೆರೆಸಿದ ನೀರು ಸೇರಿಸಿದರೆ ಫ್ರೂಟ್ ಸಲಾಡ್ ತಾಜಾವಾಗಿರುತ್ತದೆ. ಅದರಲ್ಲಿರುವ ಹಣ್ಣಿನ ಹೋಳುಗಳ ಪ್ರಮಾಣ ಆಧರಿಸಿ ನಿಂಬೆ ರಸ ಹಾಕಿ. ಈ ನೀರಿನಲ್ಲಿ ಹಣ್ಣಿನ ಹೋಳುಗಳನ್ನು ಐದು ನಿಮಿಷ ಅದ್ದಿ ಆಮೇಲೆ ಅದನ್ನು ಇನ್ನೊಂದು ಬೌಲ್ ಗೆ ಹಾಕಿ ಬಳಸಿ.

* ಫ್ರೂಟ್ ಸಲಾಡ್ ನ ಹಣ್ಣಿನ ಹೋಳುಗಳನ್ನು ಸೋಡಾ ನೀರಿನಲ್ಲಿ 5 ನಿಮಿಷ ಅದ್ದಿಟ್ಟು ಬಳಸಿದರೂ ಈ ಹೋಳುಗಳು ದೀರ್ಘ ಸಮಯದವರೆಗೆ ತಾಜಾವಾಗಿರುತ್ತದೆ.

* ಜೇನುತುಪ್ಪ ಬೆರೆಸಿದ ನೀರಿನಲ್ಲಿ ಹಣ್ಣಿನ ಹೋಳುಗಳನ್ನು ಸ್ವಲ್ಪ ಅದ್ದಿ ತೆಗೆದು ಫ್ರೂಟ್ ಸಲಾಡ್ ಮಾಡಿದರೂ ಆ ತಿನಿಸು ರುಚಿ ಮತ್ತು ಫ್ರೆಶ್ ಆಗಿರುತ್ತದೆ.

* ಕಲ್ಲುಪ್ಪು ಬೆರೆಸಿದ ನೀರಿನಲ್ಲಿ ಹಣ್ಣಿನ ಹೋಳುಗಳನ್ನು ಐದು ನಿಮಿಷ ನೆನೆಸಿಟ್ಟು ನಂತರ ಫ್ರೂಟ್ ಸಲಾಡ್ ಮಾಡಿದರೆ ಹಣ್ಣಿನ ಹೋಳುಗಳು ಫ್ರೆಶ್ ಆಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...