alex Certify ಟೂತ್ಪೇಸ್ಟ್ ಬಳಸುವ ಮುನ್ನ ಅದ್ರ ಮೇಲಿರುವ ಬಣ್ಣದ ಗೆರೆ ಏನು ಹೇಳುತ್ತೆ ಅರಿಯಿರಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೂತ್ಪೇಸ್ಟ್ ಬಳಸುವ ಮುನ್ನ ಅದ್ರ ಮೇಲಿರುವ ಬಣ್ಣದ ಗೆರೆ ಏನು ಹೇಳುತ್ತೆ ಅರಿಯಿರಿ….?

ನಾವು ಪ್ರತಿದಿನ ಟೂತ್ಪೇಸ್ಟ್ ಬಳಸ್ತೇವೆ. ಬೇರೆ ಬೇರೆ ಬ್ರ್ಯಾಂಡ್ ನ ಟೂತ್ಪೇಸ್ಟ್ ಬಳಸ್ತೇವೆ. ಕೆಲವರು ಬೆಲೆ ನೋಡಿ ಟೂತ್ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ ಮಾಡ್ತಾರೆ. ಆದ್ರೆ ಟೂತ್ಪೇಸ್ಟ್ ಮೇಲೆ ಹಾಕಿರುವ ಕಲರ್ ಬಾರ್ ಬಗ್ಗೆ ಬಹುತೇಕರು ತಿಳಿದಿಲ್ಲ. ಒಂದೊಂದು ಬ್ರ್ಯಾಂಡ್ ಟೂತ್ಪೇಸ್ಟ್ ಮೇಲೆ ಒಂದೊಂದು ಬಣ್ಣದ ಗೆರೆ ಇರುತ್ತೆ. ಇದ್ರ ಬ್ರ್ಯಾಂಡ್ ನ ಸಾಮರ್ಥ್ಯದ ಬಗ್ಗೆ ಹೇಳುತ್ತದೆ.

ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲ ಕಂಪನಿಗಳು ಟೂತ್ಪೇಸ್ಟ್ ಗೆ ಏನೇನು ಪದಾರ್ಥ ಹಾಕಿದ್ದೇವೆ ಎಂಬುದನ್ನು ಹೇಳಲೇಬೇಕು. ಕಂಪನಿಗಳು ಬಣ್ಣದ ಗೆರೆ ಮೂಲಕ ಟೂತ್ಪೇಸ್ಟ್ ಗೆ ಏನೆಲ್ಲ ವಸ್ತು ಬಳಸಿದ್ದೇವೆ ಎಂಬುದನ್ನು ಹೇಳುತ್ತವೆ. ಪಟ್ಟಿಯಲ್ಲಿ ರಹಸ್ಯ ಅಡಗಿದ್ದು, ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಟೂತ್ಪೇಸ್ಟ್ ಹಿಂದೆ ಕೊನೆಯಲ್ಲಿ ಕಪ್ಪು ಬಣ್ಣದ ಗೆರೆಯಿದ್ದರೆ ಆ ಟೂತ್ಪೇಸ್ಟನ್ನು ಅಪ್ಪಿ ತಪ್ಪಿಯೂ ಬಳಸಬೇಡಿ. ಅತಿ ಹೆಚ್ಚು ಕೆಮಿಕಲ್ ಬಳಸುವ ಕಂಪನಿಗಳು ತಮ್ಮ ಕಂಪನಿ ಟೂತ್ಪೇಸ್ಟ್ ಮೇಲೆ ಕಪ್ಪು ಗೆರೆ ಎಳೆದಿರುತ್ತವೆ.

ಕೆಂಪು ಬಣ್ಣದ ಗೆರೆಯಿದ್ದರೆ ಅದ್ರಲ್ಲೂ ರಾಸಾಯನಿಕ ಬಳಸಲಾಗಿದೆ ಎಂದೇ ಅರ್ಥ. ಆದ್ರೆ ಕಪ್ಪು ಬಣ್ಣದ ಗೆರೆಯುಳ್ಳ ಟೂತ್ಪೇಸ್ಟ್ ಗಿಂತ ಇದು ಬೆಸ್ಟ್. ಇದ್ರಲ್ಲಿ ರಾಸಾಯನಿಕ ವಸ್ತು ಜೊತೆ ನೈಸರ್ಗಿಕ ವಸ್ತುಗಳನ್ನು ಸೇರಿಸಲಾಗಿರುತ್ತದೆ.

ನೀಲಿ ಬಣ್ಣದ ಗೆರೆಯಿರುವ ಟೂತ್ಪೇಸ್ಟ್ ಬಳಕೆಗೆ ಒಳ್ಳೆಯದು. ಇದ್ರಲ್ಲಿ ನೈಸರ್ಗಿಕ ವಸ್ತುಗಳ ಜೊತೆಗೆ ಔಷಧಿ ತತ್ವಗಳಿರುತ್ತವೆ. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಹಾಗೂ ಹೊಳೆಯುವಂತೆ ಮಾಡುವ ಜೊತೆಗೆ ಬೇರೆ ಬೇರೆ ರೋಗಗಳನ್ನು ದೂರ ಮಾಡುತ್ತದೆ.

ಹಸಿರು ಬಣ್ಣದ ಗೆರೆಯಿರುವ ಟೂತ್ಪೇಸ್ಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ನೈಸರ್ಗಿಕ ಅಂಶದ ಜೊತೆ ಗಿಡಮೂಲಿಕೆಯನ್ನು ಬಳಸಲಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...