alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತಿ ಅವಶ್ಯಕ. ಇಲ್ಲದೇ ಹೋದಲ್ಲಿ ನಿಮ್ಮ ಸಂಬಂಧಗಳು ಮತ್ತು ಕೆಲಸ ಕಾರ್ಯಗಳು ಹದಗೆಡಬಹುದು. ಮಾನಸಿಕ ವ್ಯಗ್ರತೆ ಮತ್ತು ಆತಂಕದಿಂದ ಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ.

ವೃಷಭ ರಾಶಿ

ಶಾರೀರಿಕ ಅಸ್ವಸ್ಥತೆಯಿಂದಾಗಿ ಕೆಲಸಗಳು ಪೂರ್ಣಗೊಳ್ಳುವುದು ವಿಳಂಬವಾಗುತ್ತದೆ. ಇದರಿಂದ ನಿರಾಶರಾಗುತ್ತೀರಿ. ಇವತ್ತು ಯಾವುದೇ ಹೊಸ ಕೆಲಸ ಆರಂಭಿಸಬೇಡಿ. ಊಟ – ತಿಂಡಿ ಬಗ್ಗೆ ವಿಶೇಷ ಗಮನಹರಿಸುವುದು ಉತ್ತಮ.

ಮಿಥುನ ರಾಶಿ

ಇವತ್ತು ಮೋಜು-ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಇಡೀ ದಿನ ನಿಮಗೆ ಉತ್ಸಾಹದ ಕೊರತೆ ಕಂಡು ಬರುವುದಿಲ್ಲ.

ಕರ್ಕ ರಾಶಿ

ಉದ್ಯಮ ಮತ್ತು ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಇಂದು ಲಾಭವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ.

ಸಿಂಹ ರಾಶಿ

ಇವತ್ತು ಸೃಜನಾತ್ಮಕ ಮತ್ತು ಕಲೆಗೆ ಸಂಬಂಧಪಟ್ಟ ಕಾರ್ಯಗಳಿಗೆ ಶ್ರೇಷ್ಠ ದಿನ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೂ ಶುಭ ಸಮಯ. ಉತ್ತಮ ಫಲಿತಾಂಶ ಕೂಡ ದೊರೆಯಲಿದೆ.

ಕನ್ಯಾ ರಾಶಿ

ಇವತ್ತಿನ ದಿನ ಅತ್ಯಂತ ಪ್ರತಿಕೂಲವಾಗಿರಲಿದೆ. ಶಾರೀರಿಕ ಸ್ಪೂರ್ತಿಯ ಅಭಾವ ಕಾಣಿಸಲಿದೆ. ಮನಸ್ಸು ಕೂಡ ಚಿಂತೆಯ ಗೂಡಾಗಬಹುದು.

ತುಲಾ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಪ್ರತಿಸ್ಪರ್ಧಿಗಳೆದುರು ಜಯ ಸಿಗಲಿದೆ. ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಮನಸ್ಸು ನಿರಾಳವಾಗಿರುತ್ತದೆ.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಜಗಳಮುಕ್ತ ವಾತಾವರಣ ನೆಲೆಸಬೇಕೆಂದಾದಲ್ಲಿ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ನಿಮ್ಮ ಮಾತುಗಳಿಂದ ಇತರರ ಮನಸ್ಸಿಗೆ ನೋವುಂಟಾಗುವ ಸಾಧ್ಯತೆ ಇದೆ. ಹಾಗಾಗಿ ಅತ್ಯಂತ ಸಮಾಧಾನದಿಂದ ವರ್ತಿಸಿ.

ಧನು ರಾಶಿ

ಇಂದು ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ನಿಗದಿತ ಕೆಲಸಗಳನ್ನು ಇಂದು ಪೂರ್ಣಗೊಳಿಸಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಸ್ಪೂರ್ತಿ ಮತ್ತು ಪ್ರಸನ್ನತೆ ಮನಸ್ಸನ್ನು ಆವರಿಸಲಿದೆ.

ಮಕರ ರಾಶಿ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಅವುಗಳಿಗಾಗಿ ಹಣ ಖರ್ಚಾಗಲಿದೆ. ಕೋರ್ಟು ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾಗಿ ಬರಬಹುದು. ವ್ಯಾಪಾರದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಉದ್ಯಮ ಮತ್ತು ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಮಿತ್ರರ ಭೇಟಿಯಿಂದ ಮನಸ್ಸಿಗೆ ಆನಂದ ದೊರೆಯುತ್ತದೆ.

ಮೀನ ರಾಶಿ

ವ್ಯಾಪಾರಿಗಳಿಗೆ ಶುಭ ದಿನ. ಕೆಲಸಗಳು ಯಶಸ್ವಿಯಾಗೋದ್ರಿಂದ ಹಿರಿಯ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ಪದೋನ್ನತಿ ದೊರೆಯುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...