alex Certify ವಿಶೇಷ ಫಲಕ್ಕಾಗಿ ವಿಧಿ-ವಿಧಾನದಿಂದ ಮಾಡಿ ʼಶ್ರಾವಣ ಸೋಮವಾರʼ ವ್ರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ಫಲಕ್ಕಾಗಿ ವಿಧಿ-ವಿಧಾನದಿಂದ ಮಾಡಿ ʼಶ್ರಾವಣ ಸೋಮವಾರʼ ವ್ರತ

ಶ್ರಾವಣ ಸೋಮವಾರ ಯಾರು ವಿಧಿ-ವಿಧಾನದಿಂದ ಶಿವನ ಪೂಜೆ ಮಾಡುತ್ತಾರೋ ಅವರಿಗೆ ವಿಶೇಷ ಫಲ ಲಭಿಸುತ್ತದೆ. ವೃತದಿಂದಾಗಿ ಪ್ರತಿಯೊಂದು ದುಃಖ, ಕಷ್ಟ, ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಸುಖಿ, ನಿರೋಗಿ ಹಾಗೂ ಸಮೃದ್ಧಿಯ ಜೀವನ ಸಾಗಿಸ್ತಾನೆ. ಈ ದಿನ ವ್ರತ ಮಾಡುವುದರಿಂದ ಮಕ್ಕಳ ರೋಗ ಗುಣಮುಖವಾಗುತ್ತದೆ. ದುರ್ಘಟನೆ ಹಾಗೂ ಅಕಾಲ ಮೃತ್ಯವಿನಿಂದ ಮುಕ್ತಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಕಂಡು ಬರುವ ಭಿನ್ನಾಭಿಪ್ರಾಯ ದೂರವಾಗುತ್ತದೆ.

ವ್ರತ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ವ್ರತದ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಕಪ್ಪು ಎಳ್ಳನ್ನು ಹಾಕಿ ಸ್ನಾನ ಮಾಡಬೇಕು.

ಭಗವಂತ ಶಿವನ ಅಭಿಷೇಕ ನೀರು ಹಾಗೂ ಗಂಗಾಜಲದಲ್ಲಾಗುತ್ತದೆ. ವಿಶೇಷ ಫಲ ಪ್ರಾಪ್ತಿಗಾಗಿ ಹಾಲು, ತುಪ್ಪ, ಮೊಸರು, ಜೇನು, ಸಾಸಿವೆ, ಕಪ್ಪು ಎಳ್ಳಿನಿಂದ ಮಾಡ್ತಾರೆ. ಓಂ ನಮಃಶಿವಾಯ ಮಂತ್ರದ ಜೊತೆಗೆ ದೇವರಿಗೆ ಬಿಳಿ ಹೂವು, ಬಿಳಿ ಅಕ್ಕಿ, ಬಿಳಿ ಚಂದನ, ಪಂಚಾಮೃತ, ಅಡಿಕೆ, ಹಣ್ಣು ಹಾಗೂ ಗಂಗಾಜಲ ಅಥವಾ ಶುದ್ಧ ನೀರಿನಿಂದ ದೇವರ ಪೂಜೆ ಮಾಡಬೇಕು.

ದೇವರ ಪೂಜೆ ಮಾಡುವ ವೇಳೆ ಮಂತ್ರ ಜಪಿಸುವುದು ಬಹಳ ಮಹತ್ವ ಪಡೆದಿದೆ. ಶಿವ ಪಂಚಾಕ್ಷರಿ ಜಪವಿರಲಿ, ಗಾಯತ್ರಿ ಮಂತ್ರವಿರಲಿ ಇಲ್ಲ ಮೃತ್ಯುಂಜಯ ಜಪವಿರಲಿ ಪೂಜೆ ಮಾಡುವ ವೇಳೆ ಮಂತ್ರ ಪಠಿಸಬೇಕು.

ಶಿವ-ಪಾರ್ವತಿ ಪೂಜೆ ಜೊತೆಯಲ್ಲಿ ಶ್ರಾವಣ ಮಾಸದ ಕಥೆಯನ್ನು ಓದಬೇಕು. ಇದಾದ ನಂತ್ರ ಮನೆ ಮಂದಿಗೆ ಪ್ರಸಾದ ಹಂಚಿ ನಂತ್ರ ನೀವು ತೆಗೆದುಕೊಳ್ಳಿ.

ದಿನದಲ್ಲಿ ಒಂದು ಬಾರಿ ಮಾತ್ರ ಉಪ್ಪು ಸೇರಿಸಿದ ಆಹಾರ ಸೇವನೆ ಮಾಡಬೇಕು.

ಪೂರ್ತಿ ದಿನ ವ್ರತ ಮಾಡಲು ಸಾಧ್ಯವಾಗದಿದ್ದಲ್ಲಿ ಸೂರ್ಯಾಸ್ತದವರೆಗೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...