alex Certify
ಕನ್ನಡ ದುನಿಯಾ       Mobile App
       

Kannada Duniya

ಮಕರ ಸಂಕ್ರಾಂತಿಯಂದು ಅವಶ್ಯವಾಗಿ ಮಾಡಿ ಈ ಕೆಲಸ

makar_1484287421_749x421

ಜನವರಿ 14 ರಂದು ಬೆಳಿಗ್ಗೆ 7:38ಕ್ಕೆ ಸೂರ್ಯದೇವ ಮಕರ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ದಿನ ಸೂರ್ಯ ದೇವನ ಪೂಜೆ ಮಾಡಬೇಕು. ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯದೇವ ಪ್ರವೇಶ ಮಾಡಿದ ದಿನವನ್ನು ಸಂಕ್ರಾಂತಿಯೆಂದು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯಿಂದ ಶುಭ ದಿನ ಶುರುವಾಗುತ್ತದೆ. ಈ ದಿನ ದಾನ, ಜಪ, ತರ್ಪಣಕ್ಕೆ ಬಹಳ ಮಹತ್ವವಿದೆ. ಈ ದಿನ ದಾನ ಮಾಡಿದ್ರೆ ಸಾವಿರ ಪಟ್ಟು ಫಲ ಸಿಗುತ್ತದೆ.

ಮಕರ ಸಂಕ್ರಾಂತಿಯಂದು ಪುಣ್ಯಕಾಲದಲ್ಲಿ ತೀರ್ಥ ಸ್ನಾನ ಅಥವಾ ನದಿಯಲ್ಲಿ ಸ್ನಾನ ಮಾಡಬೇಕು. ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದಿದ್ದಲ್ಲಿ ನೀರಿಗೆ ಎಳ್ಳು ಮಿಶ್ರಣ ಮಾಡಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ರೋಗ ನಿವಾರಣೆಯಾಗುವ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ.

ಮಕರ ಸಂಕ್ರಾಂತಿಯಂದು ಹಿರಿಯರ ಆತ್ಮಕ್ಕೆ ಶಾಂತಿ ನೀಡಲು ತರ್ಪಣ ಬಿಡಿ. ನೀರಿಗೆ ಎಳ್ಳು ಬೆರೆಸಿ ತರ್ಪಣ ಬಿಡಿ. ಇಲ್ಲ ಎಳ್ಳಿನಲ್ಲಿ ಮಾಡಿದ ವಸ್ತುವನ್ನು ದಾನ ಮಾಡಿ. ಇದ್ರಿಂದ ಹಿರಿಯರು ಖುಷಿಯಾಗಿ ಆಶೀರ್ವಾದ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...