HomeLatest NewsSHOCKING : ದಾವಣಗೆರೆಯಲ್ಲಿ ಅತ್ತೆ ಮೇಲೆ ಯುವಕನಿಗೆ ಲವ್ : ಮದ್ವೆ ಆದ 2 ತಿಂಗಳಿಗೆ...

SHOCKING : ದಾವಣಗೆರೆಯಲ್ಲಿ ಅತ್ತೆ ಮೇಲೆ ಯುವಕನಿಗೆ ಲವ್ : ಮದ್ವೆ ಆದ 2 ತಿಂಗಳಿಗೆ ಹೆಂಡ್ತಿ ಬಿಟ್ಟು ಅತ್ತೆ ಜೊತೆ ಜೂಟ್ .!

ದಾವಣಗೆರೆ : 55 ವರ್ಷದ ಮಹಿಳೆ ಜೊತೆ ಯುವಕ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್ (25) ಪತ್ನಿಯನ್ನ ಬಸ್ ನಿಲ್ದಾಣದಲ್ಲಿ ಬಿಟ್ಟು ಆಂಟಿ ಜೊತೆ ಎಸ್ಕೇಪ್ ಆಗಿದ್ದಾನೆ.

13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್ ಎನ್ನುವವರ 2 ನೇ ಪತ್ನಿಯಾಗಿ ಶಾಂತಾ ಮನೆಗೆ ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2 ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತ ಮಗಳನ್ನು ಅವನಿಗೆ ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. 2 ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶ ಜೊತೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್ ಮದುವೆ ಮಾಡಿದ್ದರು..

ಆದರೆ ಗಣೇಶ್ ಪತ್ನಿ ಹೇಮಾಳ ಮಲತಾಯಿ ಶಾಂತಾ (55) ಗಣೇಶ್ ಓಡಿಹೋಗಿದ್ದಾನೆ. ಹೇಮಾಳ ತಂದೆ ನಾಗರಾಜ್ ಎಂಬುವವರ 2 ನೇ ಪತ್ನಿ 55 ವರ್ಷದ ಶಾಂತಾ ಜೊತೆ ಗಣೇಶ್ ಎಸ್ಕೇಪ್ ಆಗಿದ್ದಾನೆ. ನಾಗರಾಜ್ ಮಗಳಾದ ಹೇಮಾಳನ್ನು ಗಣೇಶ್ ಮದುವೆಯಾಗಿದ್ದನು. ಆದರೆ ಶಾಂತಾ ಜೊತೆಗೆ ಗಣೇಶ್ ಗೆ ಮೊದಲೇ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಪತ್ನಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪತಿ ಆಂಟಿ ಜೊತೆ ಎಸ್ಕೇಪ್ ಆಗಿದ್ದು, ಹೇಮಾ ಕಣ್ಣೀರಿಟ್ಟಿದ್ದಾಳೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular