HomeKarnatakaದರ್ಶನ್ ಗೆ ಜೈಲಿನಲ್ಲಿಯೇ ಫಿಜಿಯೋಥೆರಪಿ: ಆದರೆ ಷರತ್ತುಗಳು ಅನ್ವಯ ಎಂದ ಕೋರ್ಟ್

ದರ್ಶನ್ ಗೆ ಜೈಲಿನಲ್ಲಿಯೇ ಫಿಜಿಯೋಥೆರಪಿ: ಆದರೆ ಷರತ್ತುಗಳು ಅನ್ವಯ ಎಂದ ಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಫಿಜಿಯೋಥೆರಪಿ ಚಿಕಿತ್ಸೆಗೆ ಅವಕಾಶ ನಿಡುವಂತೆ ಕೋರಿ ಸಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಆದರೆ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ.

ಕಳೆದ 15 ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ನಟ ದರ್ಶನ್ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದ್ದು ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಕಳೆದ ಮೂರು ದಿನಗಳಿಂದಲೂ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಇಂದು (ನವೆಂಬರ್ 07) ಅರ್ಜಿಯ ಕುರಿತು ಆದೇಶ ಹೊರಡಿಸಿದ್ದು, ದರ್ಶನ್​​ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಕೆಲ ಷರತ್ತುಗಳ ಅನ್ವಯ ಅವಕಾಶ ಮಾಡಿಕೊಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್ ಅವರು ಫಿಸಿಯೋಥೆರಪಿಗಾಗಿ ಹೊರಗಿನ ಆಸ್ಪತ್ರೆ ಮೂಲಕ ಅಲ್ಲದೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅನುಮತಿಯನ್ನು ನೀಡಲಾಗಿದೆ. ಫಿಸಿಯೋಥೆರಪಿ ಹಾಗೂ ಬೆನ್ನು ನೋವಿಗೆ ಸಂಬಂಧಿಸಿದ ಇತರೆ ಚಿಕಿತ್ಸೆಗಳನ್ನು ಸಹ ದರ್ಶನ್ ಅವರು ಜೈಲಿನ ಆವರಣದಲ್ಲಿಯೇ ಪಡೆಯಬಹುದಾಗಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜೈಲಧಿಕಾರಿಗಳಿಗೆ ಸೂಚನೆ ನೀಡಿದೆ.

2024ರಲ್ಲಿ ಮೊದಲ ಬಾರಿ ದರ್ಶನ್ ಬಂಧನವಾದ ಕೆಲ ತಿಂಗಳುಗಳ ಬಳಿಕ ದರ್ಶನ್​​, ತಮಗೆ ಬೆನ್ನು ನೋವಿದ್ದು, ಅಗತ್ಯ ಚಿಕಿತ್ಸೆಯ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಆಗ ವೈದ್ಯರು ನೀಡಿದ್ದ ವರದಿಯ ಪ್ರಕಾರ, ದರ್ಶನ್ ಅವರ ಎಲ್​​4 ಮತ್ತು ಎಲ್​​5ನಲ್ಲಿ ಸಮಸ್ಯೆ ಇದ್ದು, ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಅವರ ಕಾಲು ಬಲಹೀನಗೊಳ್ಳಲಿದೆ ಎಂದಿದ್ದರು. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಸಹ ಆಗ ದರ್ಶನ್ ಪರ ವಕೀಲರು ವಾದಿಸಿದ್ದರು. ಬಳಿಕ ದರ್ಶನ್ ಅವರಿಗೆ ಜಾಮೀನು ದೊರಕಿತು.

ಈಗಲೂ ಸಹ ಕೆಲ ದಿನಗಳ ಹಿಂದೆ ದರ್ಶನ್ ಅವರು ತಮಗೆ ಬೆನ್ನು ನೋವು ಮರುಕಳಿಸಿದ್ದು, ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ದರ್ಶನ್ ಪರ ವಾದ ಮಂಡಿಸಿದ್ದ ವಕೀಲ ಹಷ್ಮತ್ ಪಾಷಾ, ‘ದರ್ಶನ್ ಕಳೆದ 15 ತಿಂಗಳುಗಳಿಂದ ಜೈಲಿನಲ್ಲಿದ್ದು, ನೆಲದ ಮೇಲೆ ಹಾಸಿಗೆಯಲ್ಲಿ ಮಲಗುತ್ತಿರುವ ಕಾರಣ ಹಾಗೂ ಚಳಿಗಾಲದ ಕಾರಣದಿಂದಾಗಿ ಅವರಿಗೆ ಬೆನ್ನು ನೋವು ಪುನರಾವರ್ತಿಸಿದೆ. ಅವರಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಬೇಕು’ ಎಂದು ವಾದಿಸಿದ್ದರು.

ಆದರೆ ಎಸ್​​ಪಿಪಿ ಅವರು, ದರ್ಶನ್​​ಗೆ ಕಳೆದ ಬಾರಿ ಬೆನ್ನು ನೋವು ಬಂದಾಗ ನಡೆದಿದ್ದನ್ನು ವಿವರಿಸಿ, ‘ಕಳೆದ ಬಾರಿ ಇವರು ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದರು. ಆದರೆ ಆಗ ಚಿಕಿತ್ಸೆ ಪಡೆಯುವ ಬದಲಿಗೆ ಕಾರ್ಯಕ್ರಮಗಳಲ್ಲಿ ಭಾಗಿ ಆದರು, ಸಿನಿಮಾ ಚಿತ್ರೀಕರಣಗಳಲ್ಲಿ ಭಾಗಿ ಆದರು. ಅದನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಬೇಕು’ ಎಂದಿದ್ದರು. ಅದರಂತೆ ಈಗ ದರ್ಶನ್ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡುವಂತೆ ನ್ಯಾಯಾಲಯದ ಆದೇಶಿಸಿದೆ.

ತಂದೆಯ ತಿಥಿ ಕಾರ್ಯಕ್ಕೆ ಪ್ರದೋಷ್‌ಗೆ 5 ದಿನ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ಗೆ ತಮ್ಮ ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು 5 ದಿನಗಳ ಕಾಲ ಹೈಕೋರ್ಟ್ ಅನುಮತಿ ನೀಡಿದೆ.

ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಇಂದಿನಿಂದ 5 ದಿನಗಳ ಕಾಲ ಅನುಮತಿ ನೀಡಿದ್ದು, ಬೆಳಿಗ್ಗೆ 8 ರಿಂದ ಸಂಜೆ 6ರವರೆಗೆ ಸಮಯ ನೀಡಿದೆ. ಈ ಹಿನ್ನೆಲೆ ಪ್ರದೋಷ್ ಪರ ವಕೀಲರು 59ನೇ ಸೆಷನ್ಸ್ ಕೋರ್ಟ್‌ಗೆ ಹೈಕೋರ್ಟ್ ಅನುಮತಿ ಆದೇಶ ಸಲ್ಲಿಕೆ ಮಾಡಿದ್ದಾರೆ.

ಜೊತೆಗೆ ಸೆಷನ್ಸ್ ಕೋರ್ಟ್ 1 ಲಕ್ಷ ರೂ. ಬಾಂಡ್ ಸೇರಿ ಹಲವು ಷರತ್ತು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಮಾಡಬಾರದು. ಪ್ರಕರಣದ ಸಾಕ್ಷಿಗಳ ಜೊತೆ ಸಂರ್ಪಕ ಮಾಡಬಾರದು. ಪ್ರಕರಣ ಸಂಬಂಧ ಅಧಿಕಾರಿಗಳ ಜೊತೆ ಸಾಕ್ಷಿ ಪ್ರದೋಷ್ ಮಾತನಾಡಬಾರದು. ತಿಥಿ ಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರ ಮಾಹಿತಿ ಕೋರ್ಟ್‌ಗೆ ನೀಡಬೇಕು. ಪ್ರತಿದಿನ 6 ಗಂಟೆ ಒಳಗೆ ಪ್ರದೋಷ್ ಜೈಲಿನ ಒಳಗೆ ವಾಪಸ್ಸು ಬರಬೇಕು. ಕಾರ್ಯದಲ್ಲಿ ಭಾಗವಹಿಸುವ ಅಡುಗೆ ಭಟ್ಟರು, ಪೂರೋಹಿತರ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ಈಗ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ.

ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಒಪ್ಪಿಕೊಂಡಿದ್ದು, ನಟ ದರ್ಶನ್ ಪರ ವಕೀಲರು ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುಪ್ರೀಂಕೋರ್ಟ್ ವರೆಗೂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನ್ಯಾಯಾಲಯದ ಮುಂದೆ ಪ್ರದೋಷ್ ಅವರು ರೇಣುಕಾಸ್ವಾಮಿ ಕೊಲೆ ಹಾಗೂ ಕೃತ್ಯದಲ್ಲಿ ಇತರ ಆರೋಪಿಗಳ ಪಾತ್ರದ ಕುರಿತು ತಮ್ಮ ಸಾಕ್ಷ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.

ಈ ನಡುವೆ ತಮ್ಮ ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಕರ್ನಾಟಕ ಹೈಕೋರ್ಟ್ ಪ್ರದೋಷ್‌ಗೆ ನವೆಂಬರ್ 7 ರಿಂದ 12ರ ವರೆಗೆ 5 ದಿನಗಳ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಮಾಫಿ ಸಾಕ್ಷಿಯಾಗಿರುವುದರಿಂದ ಅವರು ಸತ್ಯವಾದ ಮತ್ತು ಸಂಪೂರ್ಣ ಮಾಹಿತಿ ನೀಡಬೇಕಿದೆ ಮತ್ತು ವಿಚಾರಣೆ ಮುಗಿಯುವವರೆಗೆ ಕಸ್ಟಡಿಯಲ್ಲಿ ಇರಬೇಕಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular