HomeLatest NewsSHOCKING : ಅಪಾಯಕಾರಿ 'ಸ್ಟಂಟ್' ಮಾಡಲು ಹೋಗಿ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವಕ ಸಾವು :...

SHOCKING : ಅಪಾಯಕಾರಿ ‘ಸ್ಟಂಟ್’ ಮಾಡಲು ಹೋಗಿ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವಕ ಸಾವು : ವಿಡಿಯೋ ವೈರಲ್ |WATCH VIDEO

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಚಲಿಸುತ್ತಿರುವ ರೈಲಿನ ಬಾಗಿಲಿಗೆ ನೇತಾಡಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಭೀಕರ ದೃಶ್ಯವನ್ನು ಆತನ ಸ್ನೇಹಿತ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕನೊಬ್ಬ ಚಲಿಸುವ ರೈಲಿನ ಬಾಗಿಲಿಗೆ ನೇತಾಡಿಕೊಂಡು ಸಾಹಸ ಮಾಡುತ್ತಿರುವುದು ಕಂಡುಬರುತ್ತದೆ. ರೈಲು ನಿಲ್ದಾಣದತ್ತ ಬರುತ್ತಿದ್ದಂತೆ, ಆ ಯುವಕ ಓಡುತ್ತಲೇ ರೈಲಿನ ಪಕ್ಕದಲ್ಲಿ ಸಾಗಲು ಯತ್ನಿಸುತ್ತಾನೆ. ಆದರೆ, ದುರದೃಷ್ಟವಶಾತ್ ಸಮತೋಲನ ಕಳೆದುಕೊಂಡು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಜಾರಿ, ಚಲಿಸುತ್ತಿದ್ದ ರೈಲಿನ ಅಡಿಗೆ ಸಿಲುಕಿಕೊಳ್ಳುತ್ತಾನೆ.

ಘಟನೆ ನಡೆದ ನಿಖರ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ. ಸದ್ಯ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ರೈಲುಗಳ ಬಳಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡದಂತೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular