ಕಾಸರಗೋಡು: ರೈಲು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರು ಸೋಮವಾರಪುರದ ಚೆನ್ನಯ್ಯ ಅವರ ಪುತ್ರ ರಾಜೇಶ್(35) ಮೃತಪಟ್ಟವರು ಎಂದು ಹೇಳಲಾಗಿದೆ.
ರೈಲು ಹಳಿ ದಾಟಿ ಪ್ಲಾಟ್ ಫಾರಂ ಹತ್ತಲು ಯತ್ನಿಸುತ್ತಿದ್ದಾಗ ಗೂಡ್ಸ್ ರೈಲು ಡಿಕ್ಕಿ ಹೊಡೆದು ರಾಜೇಶ್ ಮೃತಪಟ್ಟಿದ್ದಾರೆ. ಅವರ ಅಂಗಿಯ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ಮಾಹಿತಿಯಂತೆ ವ್ಯಕ್ತಿಯನ್ನು ಗುರುತಿಸಲಾಗಿದೆ. ಮೃತರ ಸಂಬಂಧಿಕರಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ. ರೈಲಿನಿಂದ ಇಳಿದು ಅಜಾಗರೂಕತೆಯಿಂದ ಹಳಿ ದಾಟಿ ನಿಲ್ದಾಣದ ಫ್ಲಾಟ್ ಫಾರಂ ಹತ್ತಲು ಪ್ರಯತ್ನಿಸಿದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ.

