ಬೆಂಗಳೂರು: ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್. ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ್ಯಾಂಪ್ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ಅನುಕೂಲವಾಗಲಿದೆ.
ಹಲವು ವರ್ಷಗಳಿಂದ ಕಾಯುತ್ತಿದ್ದ ವಾಹನ ಸವಾರರಿಗೆ ಕೊನೆಗೂ ಶುಭ ಸುದ್ದಿ. ಹೆಬ್ಬಾಳ ಮೇಲ್ಸೇತುವೆಯ ಮತ್ತೊಂದು ಹೊಸ ಲೂಪ್ ರ್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಇದರಿಂದ ಎಸ್ಟೀಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಿಸುವುದಕ್ಕೆ ಅನುಕೂಲಕವಾಗಲಿದೆ.
ಕಳೆದ ಆಗಸ್ಟ್ ನಲ್ಲಿ ಕೆಆರ್ ಪುರದಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ್ಯಾಂಪ್ ಓಪನ್ ಆಗಿತ್ತು. ಈಗ ಮತ್ತೆ ಎಸ್ಟೀಮ್ ಮಾಲ್ನಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರ್ಯಾಂಪ್ ಓಪನ್ ಆಗಿರುವುದು ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಕೊಂಚ ಮುಕ್ತಿ ಸಿಕ್ಕಂತಾಗಿದೆ.

