HomeLatest NewsBREAKING: ಶಾರ್ಟ್ ಬಟ್ಟೆ ಧರಿಸಿ ಓಡಾಟ: ಬುದ್ಧಿ ಹೇಳಿದ ಹೋಂ ಗಾರ್ಡ್ ಗೆ ಥಳಿಸಿ ಹಲ್ಲೆ...

BREAKING: ಶಾರ್ಟ್ ಬಟ್ಟೆ ಧರಿಸಿ ಓಡಾಟ: ಬುದ್ಧಿ ಹೇಳಿದ ಹೋಂ ಗಾರ್ಡ್ ಗೆ ಥಳಿಸಿ ಹಲ್ಲೆ ನಡೆಸಿದ ಯುವತಿ

ಬೆಂಗಳೂರು: ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಂ ಗಾರ್ಡ್ ನನ್ನೇ ಯುವತಿ ಥಳಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೋಹಿನಿ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ. ಲಕ್ಷ್ಮೀನರಸಮ್ಮ ಹಲ್ಲೆಗೊಳಗಾದ ಹೋಂ ಗಾರ್ಡ್. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದೆ.

ಯುವತಿ ಮೋಹಿನಿ ಶಾರ್ಟ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದಳು. ಯುವತಿಯನ್ನು ನೋಡಿ ಕೆಲ ಯುವಕರು ಚುಡಾಯಿಸುತ್ತಿದ್ದರು. ರಸ್ತೆಯಲ್ಲಿ ಪುಂಡರು ಪೀಡಿಸುತ್ತಿರುವುದನ್ನು ಕಂಡು ಹೋಂಗಾರ್ಡ್ ಲಕ್ಷ್ಮೀನರಸಮ್ಮ ಯುವತಿಗೆ ಕರೆದು ವಿಚಾರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾರ್ಟ್ ಬಟ್ಟೆಗಳನ್ನು ಧರಿಸಿ ಹೀಗೆ ಓಡಾಡಬೇಡ. ಸರಿಯಾಗಿ ಬಟ್ಟೆ ಹಾಕಿಕೊಳ್ಳುವಂತೆ ಬುದ್ಧಿ ಹೇಳಿದ್ದಾರೆ. ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಯುವತಿ, ನನಗೆ ಹೇಳಲು ನೀನ್ಯಾರು? ಎಂದು ಹೋಂ ಗಾರ್ಡ್ ಗೆ ಮನಬಂದಂತೆ ಹೊಡೆದು ಹಲ್ಲೆ ನಡೆಸಿದ್ದಾಳೆ. ಸ್ಥಳೀಯರು ಆಗಮಿಸಿ ಹೋಂ ಗಾರ್ಡ್ ಮಹಿಳೆಯನ್ನು ರಕ್ಷಿಸಿದ್ದಾರೆ. ಹಲ್ಲೆ ನಡೆಸಿರುವ ಯುವತಿ ಮೋಹಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular