HomeKarnatakaಸಾಂತ್ವನ ಕೇಂದ್ರದ ಕಟ್ಟಡದಿಂದ ಹಾರಿ ಯುವತಿ ಆತ್ಮಹತ್ಯೆ

ಸಾಂತ್ವನ ಕೇಂದ್ರದ ಕಟ್ಟಡದಿಂದ ಹಾರಿ ಯುವತಿ ಆತ್ಮಹತ್ಯೆ

ರಾಯಚೂರು: ಪೊಲೀಸ್ ಠಾಣೆಯಲ್ಲಿ ಒಪ್ಪಿ ಸಾಂತ್ವನ ಕೇಂದ್ರದಲ್ಲಿ ಯುವಕ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ದೇವರ ಕಾಲೋನಿಯಲ್ಲಿ ನಡೆದಿದೆ.

ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ದುಡುಕಿನ ನಿರ್ಧಾರ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 19 ವರ್ಷದ ಅನುರಾಧ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಕಟ್ಟಡದ ಮೇಲಿಂದ ಹಾರಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಟ್ಟಡದ ಮೇಲಿಂದ ಹಾರಿದ್ದ ಪರಿಣಾಮ ಯುವತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಯುವತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಯುವತಿ ಅನುರಾಧ ವಿನಯ್ ರೆಡ್ಡಿ ಎಂಬಾತನನ್ನು ಪ್ರೀತಿಸಿದ್ದಳು. ಜೂನ್ 20ರಂದು ರಕ್ಷಣೆ ಕೋರಿ ಮಾರ್ಕೆಟ್ ಯಾರ್ಡ್ ಠಾಣೆಗೆ ಯುವಕ ಯುವತಿ ಹೋಗಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲಿ ಯುವಕ ಪ್ರೀತಿ ಒಪ್ಪಿಕೊಂಡಿದ್ದ. ಹಾಗಾಗಿ ಪೋಷಕರ ಜೊತೆ ಹೋಗಲ್ಲ ಎಂದು ಯುವತಿ ಪೊಲೀಸರಿಗೆ ಹೇಳಿದ್ದಳು. ಪೋಷಕರ ಜೊತೆ ಹೋಗಲು ನಿರಾಕರಿಸಿದ್ದಕ್ಕೆ ಪೊಲೀಸರು ಯುವತಿಯನ್ನು ಮಹಿಳಾ ಸಂತ್ವನ ಕೇಂದ್ರದಲ್ಲಿ ಇರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಸಾಂತ್ವನ ಕೇಂದ್ರಕ್ಕೆ ಬಂದ ಯುವಕ ವಿನಯ್ ರೆಡ್ಡಿ, ಯುವತಿಗೆ ಮದುವೆಯಾಗಲ್ಲ ಎಂದು ಹೇಳಿ ಹೋಗಿದ್ದಾನೆ. ಪ್ರಿಯತಮ ಕೈಕೊಟ್ಟಿದ್ದರಿಂದ ತೀವ್ರವಾಗಿ ಮನನೊಂದಿದ್ದ ಯುವತಿ ಮಹಿಳಾ ಸಾಂತ್ವನ ಕೇಂದ್ರದ ಮೊದಲ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆರೋಪಿ ವಿನಯ್ ರೆಡ್ದಿಗಾಗಿ ಪಶ್ಚಿಮ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular