HomeKarnatakaಪಾಪ ಪುಣ್ಯ ಅಂತರಾತ್ಮ, ಪರಮಾತ್ಮನಿಗೆ ಮಾತ್ರ ಗೊತ್ತು.....ಎಂದ MLC ಸಿ.ಟಿ. ರವಿ

ಪಾಪ ಪುಣ್ಯ ಅಂತರಾತ್ಮ, ಪರಮಾತ್ಮನಿಗೆ ಮಾತ್ರ ಗೊತ್ತು…..ಎಂದ MLC ಸಿ.ಟಿ. ರವಿ

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ, ಕಾನೂನು ಇದೆ ನಾವೇನೂ ಹೇಳಲು ಆಗಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಪಾಪ, ಪುಣ್ಯ ನನಗೆ ಗೊತ್ತಿಲ್ಲ. ಪಾಪ, ಪುಣ್ಯ ಅಂತರಾತ್ಮ, ಪರಮಾತ್ಮನಿಗೆ ಮಾತ್ರ ಗೊತ್ತು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಈ ನೆಲದ ಕಾನೂನು ಇದೆ. ಕಾನೂನು ಎಲ್ಲರಿಗೂ ಒಂದೇ. ನಾವು ಏನೂ ಹೇಳೋಕೆ ಬರಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular