HomeEntertainmentಜೈ Toxic ಎಂದ ನಿರ್ದೇಶಕ ಯೋಗರಾಜ್ ಭಟ್

ಜೈ Toxic ಎಂದ ನಿರ್ದೇಶಕ ಯೋಗರಾಜ್ ಭಟ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೀಸರ್ ಮೂಲಕ ಯಶ್ ಪಾತ್ರದ ಎರಡು ಶೇಡ್ ಅನಾವರಣಗೊಂಡಿದೆ. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾದು ಕುಳಿತಿದ್ದಾರೆ.

‘ಟಾಕ್ಸಿಕ್’ ಚಿತ್ರದ ನೋಡಿದ ಜನರು, ಚಿತ್ರರಂಗದ ಗಣ್ಯರು ತಮ್ಮ ಅಭಿಪ್ರಾಯವನ್ನು ಹೇಳಿದ್ದು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನಟ, ನಿರ್ದೇಶಕ ಯೋಗರಾಜ್ ಭಟ್, ‘Toxic..!! ಅಸಾಧಾರಣ ಹೆಜ್ಜೆ..ನಮ್ಮೂರು ಹೆಮ್ಮೆಯ ನಟನ ಅಭೂತಪೂರ್ವ ಜರ್ನಿ ..ಜೈ Toxic’ ಎಂದು ಪೋಸ್ಟ್ ಹಾಕಿದ್ದಾರೆ.

ಯೋಗರಾಜ್ ಭಟ್ ತಮ್ಮ ಪೋಸ್ಟ್‌ನಲ್ಲಿ, ‘Toxic..!! ಇದೊಂದು ಅಸಾಧಾರಣ ಹೆಜ್ಜೆ. ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ ಸಾಹಸಮಯ ಜಾಗತಿಕ ಜರ್ನಿ. ಚಿತ್ರದ ತುಣುಕಿನಲ್ಲೇ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಜೈ ಕನ್ನಡ, ಜೈ ದೇಶ, ಜೈ ಜಗತ್ತು, ಜೈ ಜನತೆ, , ಜೈ Toxic’ ಎಂದು ಹೇಳಿದ್ದು ತಮ್ಮ ಸಹಿಯನ್ನು ಯೋಗರಾಜ್ ಭಟ್ಟರು ಮಾಡಿದ್ದಾರೆ. ಈ ಮೂಲಕ ಯಶ್‌ ಚಿತ್ರಕ್ಕೆ ಅವರು ಶುಭ ಹಾರೈಸಿದ್ದಾರೆ.

ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟೀಸರ್ ಫೆಬ್ರವರಿ 20ರಂದು ಬಿಡುಗಡೆಯಾಗಿದೆ. ಕೆವಿಎನ್‌ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಇದು ವರೈಲ್ ಆಗಿತ್ತು.

ಯಶ್ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಭಾಷೆಯ ಲಿಂಕ್‌ಗಳನ್ನು ಹಂಚಿಕೊಂಡಿದ್ದರು. ಟೀಸರ್ ಮೂಲಕವೇ ಅಪಾರ ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿದೆ. ಅಭಿಮಾನಿಗಳು ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular