HomeEntertainmentಯಶ್‌ ಬೆಳೆದರೆ ನಮಗೆ ಕಷ್ಟ ಎಂದು ಟಾಕ್ಸಿಕ್ ಸೋಲಿಸಲು ನಿಂತ ತೆಲುಗು ಮಂದಿ: ರಾಮ್‌ಚರಣ್‌ರಿಂದ ರಶ್ಮಿಕಾವರೆಗೆ...

ಯಶ್‌ ಬೆಳೆದರೆ ನಮಗೆ ಕಷ್ಟ ಎಂದು ಟಾಕ್ಸಿಕ್ ಸೋಲಿಸಲು ನಿಂತ ತೆಲುಗು ಮಂದಿ: ರಾಮ್‌ಚರಣ್‌ರಿಂದ ರಶ್ಮಿಕಾವರೆಗೆ ನಮ್ ಬಾಸ್‌ನ ತುಳಿದ್ರು ಎಂದ ಫ್ಯಾನ್ಸ್!

ಮೊನ್ನೆಯಷ್ಟೇ ( ಆಗಸ್ಟ್ 26 ) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಗೊಂಡಿದ್ದು, ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇನ್ನು ಕೆಜಿಎಫ್ ಚಿತ್ರ ಸರಣಿಯ ಯಶಸ್ಸಿನ ಬಳಿಕ ಬಿಡುಗಡೆಯಾದ ಟಾಕ್ಸಿಕ್ ಸಹ ಅಷ್ಟೇ ಮಟ್ಟದಲ್ಲಿ ಹೈಪ್ ಪಡೆದುಕೊಂಡು ಮೊದಲ ದಿನ 150 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಆರಂಭವನ್ನು ಪಡೆದುಕೊಂಡಿದೆ.

ಎರಡನೇ ದಿನವೂ ಸಹ ಒಳ್ಳೆಯ ಬುಕಿಂಗ್ ನಡೆದಿದ್ದು, ಎರಡೇ ದಿನಗಳಲ್ಲಿ ಚಿತ್ರ 200+ ಕೋಟಿ ರೂ ಗಳಿಕೆ ಮಾಡಲಿದ್ದು, ವಾರಾಂತ್ಯದಲ್ಲಿ ಮತ್ತಷ್ಟು ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆಯಿದೆ. ಹೀಗೆ ಕನ್ನಡದ ಚಿತ್ರವೊಂದು ಬಹು ದಿನಗಳ ಬಳಿಕ ದೇಶದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಟಾಕ್ಸಿಕ್ ಬಿಡುಗಡೆಯ ದಿನ ಬೆಳ್ಳಂಬೆಳಗ್ಗೆಯೇ ತೆಲುಗು ಪೇಜ್‌ಗಳು ಎಬ್ಬಿಸಿದ ನೆಗೆಟಿವ್ ರಿವ್ಯೂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ತೆಲುಗು ನೆಪೋಟಿಸಂ ಮಾಫಿಯಾ ಕುರಿತ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ತಮ್ಮ ಇಂಡಸ್ಟ್ರಿಯ ನಟರನ್ನೇ ಮೀರಿಸಿ ಯಶ್ ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ತೆಲುಗು ಸಿನಿಮಾ ಪೇಜ್‌ಗಳು ಹಾಗೂ ನಟರು ಬೇಕಂತಲೇ ಯಶ್ ಟಾಕ್ಸಿಕ್ ವಿರುದ್ಧ ನೇರವಾಗಿ ಹಾಗೂ ಪರೋಕ್ಷವಾಗಿ ಟ್ವೀಟ್ ಮಾಡಿದ್ದಾರೆ ಎಂದು ಕನ್ನಡಿಗರು ಹಾಗೂ ಯಶ್ ಅಭಿಮಾನಿಗಳು ಆರೋಪಿಸಿದ್ದಾರೆ.

ತೆಲುಗು ನಟರಾದ ರಾಮ್‌ ಚರಣ್, ವರುಣ್ ತೇಜ್, ಚಿರಂಜೀವಿ, ವಿಜಯ್ ದೇವರಕೊಂಡ ಹಾಗೂ ನಟಿಯಾದ ರಶ್ಮಿಕಾ ಮಂದಣ್ಣ ಕಳೆದ ವಾರ ಬಿಡುಗಡೆಯಾದ ತೆಲುಗು ಚಿತ್ರ ಇರುಮುಡಿ ಚಿತ್ರದ ಬಗ್ಗೆ ಟಾಕ್ಸಿಕ್ ಬಿಡುಗಡೆಯಾದ ದಿನದಂದು ಚಿತ್ರ ಚೆನ್ನಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಟಾಕ್ಸಿಕ್ ವಿರುದ್ಧ ದನಿ ಎತ್ತಿದ್ದಾರೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ. ಇರುಮುಡಿ ಚಿತ್ರ ಬಿಡುಗಡೆಯಾಗಿ ಒಂದು ವಾರವಾದರೂ ಅದರ ಬಗ್ಗೆ ಮಾತನಾಡದೇ ಟಾಕ್ಸಿಕ್ ಬಿಡುಗಡೆಯ ದಿನವೇ ಅದರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಒಳಸಂಚು ಎಂದಿದ್ದಾರೆ.

ಇನ್ನು ತೆಲುಗು ಪೇಜ್‌ಗಳು ಭಾರತದಲ್ಲಿ ಚಿತ್ರದ ಮೊದಲ ಪ್ರದರ್ಶನ ಮುಗಿಯುವ ಮುನ್ನವೇ ಸಾಲು ಸಾಲು ನೆಗೆಟಿವ್ ರಿವ್ಯೂಗಳನ್ನು ಹರಡಿ ಚಿತ್ರಕ್ಕೆ ಅಪಪ್ರಚಾರ ತರಲು ಮುಂದಾಗಿದ್ದವು ಎಂದು ಆರೋಪಿಸಿರುವ ಕನ್ನಡಿಗರು ಎಲ್ಲ ಸೇರಿಕೊಂಡು ತಮ್ಮ ಇಂಡಸ್ಟ್ರಿಗಿಂತ ಬೆಳೆಯುತ್ತಿರುವ ಯಶ್‌ ಯಶಸ್ಸಿನಿಂದ ತಮಗೆ ಕಷ್ಟ ಎಂದು ಟಾಕ್ಸಿಕ್ ಸೋಲಿಸಲು ಸಜ್ಜಾದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇನ್ಸ್ಟಾಗ್ರಾಮ್‌ನಲ್ಲಿ ಹಣ ಖರ್ಚು ಮಾಡಿ ಟಾಕ್ಸಿಕ್ ಕುರಿತು ನೆಗೆಟಿವ್ ವಿಮರ್ಶೆಗಳನ್ನು ಹರಡಿ ಅವುಗಳನ್ನು ಅಡ್ವರ್ಟೈಸ್ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನೂ ಸಹ ಮಾಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular