HomeLatest NewsBREAKING: ನಟ ಯಶ್ ಗೆ ಭೂ ಒತ್ತುವರಿ ತೆರವು ಶಾಕ್: ಮನೆಯ ಸುತ್ತ ಅಕ್ರಮವಾಗಿ ನಿರ್ಮಿಸಿದ್ದ...

BREAKING: ನಟ ಯಶ್ ಗೆ ಭೂ ಒತ್ತುವರಿ ತೆರವು ಶಾಕ್: ಮನೆಯ ಸುತ್ತ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ತೆರವು

ಹಾಸನ: ರಾಕಿಂಗ್ ಸ್ಟಾರ್ ಯಶ್ ಗೆ ಭೂ ಒತ್ತುವರಿ ತೆರವು ಶಾಕ್ ನೀಡಲಾಗಿದೆ. ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್ ನ್ನು ತೆರವು ಮಾಡಲಾಗಿದೆ.

ಹಾಸನದ ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ನಿರ್ಮಿಸಲಾಗಿತ್ತು. ಮನೆಯ ಸುತ್ತಲು 1500 ಅಡಿಗಳಷ್ಟು ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಜಾಗದ ಮಾಲೀಕರು ಆರೋಪಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಕೋರ್ಟ್ ಆದೇಶದ ಮೇರೆಗೆ ಕೋರ್ಟ್ ನಿಂದ ಅನುಮತಿ ಪಡೆದು ಲಕ್ಷ್ಮ್ಮಮ್ಮ ಜಾಗದಲ್ಲಿ ನಿರ್ಮಿಸಿಇದ್ದ ಅಕ್ರಮ ಕಾಂಪೌಂಡ್ ಗಳನ್ನು ಜೆಸಿಬಿ ಮೂಲಕವಾಗಿ ತೆರವುಗೊಳಿಸಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳಂಬೆಳಿಗ್ಗೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗಳನ್ನು ಕೆಡವಲಾಯಿತು.

ಕಾಂಪೌಂಡ್ ತೆರವು ಮಾಡುತ್ತಿದ್ದಂತೆ ನಟ ಯಶ್ ತಾಯಿ ಪುಷ್ಪ ಪರ ವಕೀಲರು ಸ್ಥಳಕ್ಕೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular