HomeLatest Newsವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಪುರುಷರ ಪಟ್ಟಿ ರಿಲೀಸ್: ಸ್ಪೇನ್ ನಂ.1 ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ವಿಶ್ವದ ಮೋಸ್ಟ್ ಹ್ಯಾಂಡ್ಸಮ್ ಪುರುಷರ ಪಟ್ಟಿ ರಿಲೀಸ್: ಸ್ಪೇನ್ ನಂ.1 ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಸಾಮಾನ್ಯವಾಗಿ ಸೌಂದರ್ಯ ಎಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು ವೆನೆಜುವೆಲಾ ದೇಶದ ಮಹಿಳೆಯರು. ಅವರ ಹೊಳೆಯುವ ಚರ್ಮ, ದಟ್ಟವಾದ ಕಪ್ಪು ಕೂದಲು ಮತ್ತು ಆಕರ್ಷಕ ಮೈಬಣ್ಣಕ್ಕೆ ಇಡೀ ಜಗತ್ತೇ ಫಿದಾ ಆಗಿದೆ. ಆದರೆ, ಯಾವ ದೇಶದ ಪುರುಷರು ಅತ್ಯಂತ ಸುಂದರರು? ಎಂಬ ಪ್ರಶ್ನೆ ಬಂದಾಗ ಮಾತ್ರ ಹಲವರಲ್ಲಿ ಕುತೂಹಲದ ಜೊತೆಗೆ ಒಂದು ಸಣ್ಣ ಗೊಂದಲವೂ ಇತ್ತು. ಈಗ ಆ ಕುತೂಹಲಕ್ಕೆ ಜಾಗತಿಕ ವೇದಿಕೆಗಳಾದ ಇನ್ಫೋಡೆಕ್ಸ್ (Infodex) ಮತ್ತು ಇನ್ಸೈಡರ್ ಮಂಕಿ (InsiderMonkey) ತೆರೆ ಎಳೆದಿವೆ

ವಿಶ್ವದಾದ್ಯಂತ ಸಮೀಕ್ಷೆ ನಡೆಸಿರುವ ಈ ಸಂಸ್ಥೆಗಳು ಟಾಪ್ 25 ಸುಂದರ ಪುರುಷರಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ವಿಶೇಷವೆಂದರೆ ಜಪಾನ್ ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನದಂತಹ ದೇಶಗಳ ನಡುವೆ ನಮ್ಮ ಭಾರತ ಕೂಡ ಈ ಪಟ್ಟಿಯಲ್ಲಿ ಮಿಂಚುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.

ಸೌಂದರ್ಯದ ಮಾನದಂಡಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಕೆಲವು ಕಡೆ ಕೇವಲ ಮುಖದ ಲಕ್ಷಣಗಳನ್ನು ನೋಡಿದರೆ, ಇನ್ನು ಕೆಲವು ಕಡೆ ಕಟ್ಟುಮಸ್ತಾದ ದೇಹ (Fit Body) ಗ್ರೂಮಿಂಗ್ ಸೆನ್ಸ್ ಮತ್ತು ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಹೆಚ್ಚಿನ ಬೆಲೆ ನೀಡಲಾಗುತ್ತದೆ. ಈ ಎಲ್ಲ ಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ ಮತ್ತು ಭಾರತೀಯರು ಎಷ್ಟನೇ ಸ್ಥಾನದಲ್ಲಿ ಮಿಂಚುತ್ತಿದ್ದಾರೆ ಎಂಬ ರೋಚಕ ಮಾಹಿತಿ ಇಲ್ಲಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌಂದರ್ಯದ ಮಾನದಂಡಗಳೇನು?

ಸೌಂದರ್ಯದ ವ್ಯಾಖ್ಯಾನ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವು ಕಡೆ ಚೂಪಾದ ಮುಖದ ಲಕ್ಷಣಗಳಿಗೆ ಬೆಲೆ ಇದ್ದರೆ ಇನ್ನು ಕೆಲವು ಕಡೆ ಕಟ್ಟುಮಸ್ತಾದ ದೇಹ (Fit Body) ಹೈಜೀನ್ ಮತ್ತು ಆತ್ಮವಿಶ್ವಾಸವನ್ನು ಸೌಂದರ್ಯದ ಮಾನದಂಡವನ್ನಾಗಿ ಅಳೆಯಲಾಗುತ್ತದೆ.

ವಿಶ್ವದ ನಂಬರ್ 1 ‘ಹ್ಯಾಂಡ್ಸಮ್’ ದೇಶ ಯಾವುದು?

ವರದಿಯ ಪ್ರಕಾರ, ಸ್ಪೇನ್ (Spain) ದೇಶದ ಪುರುಷರು ವಿಶ್ವದಲ್ಲೇ ಅತ್ಯಂತ ಸುಂದರ ಪುರುಷರು ಎಂದು ಮೊದಲ ಸ್ಥಾನ ಪಡೆದಿದ್ದಾರೆ. ಸ್ಪ್ಯಾನಿಷ್ ಪುರುಷರು ಸಾಮಾನ್ಯವಾಗಿ ಆಕರ್ಷಕ ಮೈಬಣ್ಣ, ಚೂಪಾದ ದವಡೆ (Jawline) ಮತ್ತು ತೆಳ್ಳಗಿನ ಆದರೆ ಸದೃಢವಾದ ದೇಹಕ್ಕೆ ಹೆಸರಾಗಿದ್ದಾರೆ.

ಟಾಪ್ 6 ದೇಶಗಳು:

1ನೇ ಸ್ಥಾನ: ಸ್ಪೇನ್

2ನೇ ಸ್ಥಾನ: ಸ್ವೀಡನ್ (ಇಲ್ಲಿನ ಪುರುಷರ ನೀಲಿ ಕಣ್ಣು ಮತ್ತು ಹೊಂಬಣ್ಣದ ಕೂದಲು ಆಕರ್ಷಕ)

3ನೇ ಸ್ಥಾನ: ಫ್ರಾನ್ಸ್

4ನೇ ಸ್ಥಾನ: ಬ್ರೆಜಿಲ್

5ನೇ ಸ್ಥಾನ: ಇಟಲಿ

6ನೇ ಸ್ಥಾನ: ಟರ್ಕಿ

ಭಾರತಕ್ಕೆ ಸಿಕ್ಕಿದೆ ಗೌರವದ ಸ್ಥಾನ

ಭಾರತೀಯ ಪುರುಷರು ಈ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದಲ್ಲಿ ವಿವಿಧ ಬಗೆಯ ಮೈಬಣ್ಣ ಮತ್ತು ವೈಶಿಷ್ಟ್ಯಗಳಿರುವ ಪುರುಷರಿದ್ದಾರೆ. ಕೆಲವರ ಆಕರ್ಷಕ ಕಣ್ಣುಗಳು ಇನ್ನು ಕೆಲವರ ಕಾಂತಿಯುತ ಮೈಬಣ್ಣ ಮತ್ತು ಪ್ರಭಾವಶಾಲಿ ವ್ಯಕ್ತಿತ್ವವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಪಾಕಿಸ್ತಾನ ಮತ್ತು ಇತರ ಏಷ್ಯನ್ ದೇಶಗಳು:
ಈ ಪಟ್ಟಿಯಲ್ಲಿ ನೆರೆಯ ದೇಶ ಪಾಕಿಸ್ತಾನಕ್ಕೂ ಸ್ಥಾನ ಸಿಕ್ಕಿದೆ.

ಜಪಾನ್: 9ನೇ ಸ್ಥಾನ

ಸೌದಿ ಅರೇಬಿಯಾ: 11ನೇ ಸ್ಥಾನ

ಚೀನಾ: 16ನೇ ಸ್ಥಾನ

ಪಾಕಿಸ್ತಾನ: 19ನೇ ಸ್ಥಾನ (ಪಾಕಿಸ್ತಾನದ ಪುರುಷರು ಸಾಮಾನ್ಯವಾಗಿ ಎತ್ತರ ಮತ್ತು ಬಿಳಿ ಮೈಬಣ್ಣಕ್ಕೆ ಹೆಸರಾಗಿದ್ದಾರೆ)

ದಕ್ಷಿಣ ಕೊರಿಯಾ: 25ನೇ ಸ್ಥಾನ

ಪಟ್ಟಿಯಲ್ಲಿರುವ ಇತರೆ ದೇಶಗಳು:
8ನೇ ಸ್ಥಾನದಲ್ಲಿ ಯುಕೆ (UK), 10ನೇ ಸ್ಥಾನದಲ್ಲಿ ಜರ್ಮನಿ, 13ನೇ ಸ್ಥಾನದಲ್ಲಿ ಕೆನಡಾ ಮತ್ತು 15ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇವೆ. ಪಟ್ಟಿಯ ಕೊನೆಯ ಭಾಗದಲ್ಲಿ ವಿಯೆಟ್ನಾಂ (22), ಸೊಮಾಲಿಯಾ (23) ಮತ್ತು ಅಂಗೋಲಾ (24) ದೇಶಗಳಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular