HomeInternationalಪತಿ ಜೊತೆಯಲ್ಲಿ ಆತನ ತಂದೆಯನ್ನೂ ಮದುವೆಯಾದ ಮಹಿಳೆ.....! ಇದರ ಹಿಂದಿತ್ತು ಒಂದು ಕಾರಣ

ಪತಿ ಜೊತೆಯಲ್ಲಿ ಆತನ ತಂದೆಯನ್ನೂ ಮದುವೆಯಾದ ಮಹಿಳೆ…..! ಇದರ ಹಿಂದಿತ್ತು ಒಂದು ಕಾರಣ

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳುತ್ತಾರೆ. ಗುರು – ಹಿರಿಯರೆಲ್ಲ ಸೇರಿ ನಿಶ್ಚಯಿಸಿ, ಮುಹೂರ್ತ ನೋಡಿ ಮದುವೆ ಮಾಡಿದ ಬಳಿಕವೂ ಕೆಲವೊಂದು ವೈವಾಹಿಕ ಸಂಬಂಧಗಳು ಮುರಿದು ಬೀಳುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಆಕಸ್ಮಾತ್​ ಆಗಿ ತಾನು ನನ್ನ ಮಾವನನ್ನೇ ಮದುವೆಯಾಗಿದ್ದೇನೆ ಎಂದು ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ.

ಆಸ್ಟ್ರೇಲಿಯನ್​ ಬ್ರೆಕ್​ಫಾಸ್ಟ್​ ರೆಡಿಯೋ ಕಾರ್ಯಕ್ರಮದಲ್ಲಿ, ಈ ವಿಚಾರವನ್ನು ಮಹಿಳೆ ಬಹಿರಂಗಪಡಿಸಿದ್ದಾಳೆ. ಕಿಮ್​​ ಎಂಬ ಮಹಿಳೆಯ ಜೀವನದಲ್ಲಿ ಇಂತಹ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ನನ್ನ ಮದುವೆಗೆ ನನ್ನ ಅತ್ತೆ ಹಾಗೂ ಮಾವ ಸಾಕ್ಷಿಯಾಗಬೇಕಿತ್ತು. ನಮ್ಮ ಮದುವೆಗೆ ಸಾಕ್ಷ್ಯ ನೀಡಲು ನನ್ನ ತಾಯಿ ಹಾಗೂ ನನ್ನ ಪತಿಯ ತಂದೆ ಬಂದಿದ್ದರು. ನನ್ನ ಅತ್ತೆ ಕೂಡ ಈ ಸಮಯದಲ್ಲಿ ಹಾಜರಿದ್ದರು.

ನನ್ನ ಮದುವೆ ಪ್ರಮಾಣ ಪತ್ರದಲ್ಲಿ ನನ್ನ ಪತಿ ಹಾಗೂ ಮಾವ ಇಬ್ಬರೂ ಒಂದೇ ಜಾಗದಲ್ಲಿ ಸಹಿ ಹಾಕಿದ್ದರು. ಈ ಮೂಲಕ ನಾನು ಅಂದು ನನ್ನ ಪತಿ ಹಾಗೂ ಮಾವ ಇಬ್ಬರನ್ನೂ ಮದುವೆಯಾಗಿದ್ದೆ. ಆದರೆ ಇದು ಕೇವಲ ಈ ಪ್ರಮಾಣ ಪತ್ರಕ್ಕೆ ಮಾತ್ರ ಸೀಮಿತವಾಗಿತ್ತೇ ಹೊರತು ಇನ್ಯಾವ ದಾಖಲೆಯಲ್ಲಿಯೂ ಇದು ಇರಲಿಲ್ಲ ಎಂದು ಮಹಿಳೆ ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular