HomeKarnatakaಕಾಂಗ್ರೆಸ್ ಮಾಜಿ ಶಾಸಕನಿಗೆ ನೋಟಿಸ್ ಜಾರಿ; ಉಚ್ಛಾಟನೆ ಭೀತಿ

ಕಾಂಗ್ರೆಸ್ ಮಾಜಿ ಶಾಸಕನಿಗೆ ನೋಟಿಸ್ ಜಾರಿ; ಉಚ್ಛಾಟನೆ ಭೀತಿ

ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡುವ ಭೀತಿ ಶುರುವಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಮಾಜಿ ಶಾಸಕ ಪಿ. ವಾಸುಗೆ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನೋಟಿಸ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೀರಿ. ಚಾಮರಾಜ ಕ್ಷೇತ್ರದ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದೀರಿ. ಈ ಬಗ್ಗೆ ಕೆಪಿಸಿಸಿಗೆ ಲಿಖಿತ ಪತ್ರ ಬಂದಿದೆ. ನಿಮಗೆ ನೋಟಿಸ್ ಸಿಕ್ಕ 7 ದಿನಗಳ ಒಳಗೆ ವಿವರಣೆ ನೀಡಿ ಎಂದು ನೊಟೀಸ್ ನಲ್ಲಿ ಉಲ್ಲೇಘಿಸಲಾಗಿದೆ.

ಒಟ್ಟಾರೆ ಪಕ್ಷವಿರೋಧಿ ಚಟುವಟಿಕೆ ಆರೋಪದಲ್ಲಿ ಮಾಜಿ ಶಾಸಕ ವಾಸು ತಲೆ ಮೇಲೆ ಕಾಂಗ್ರೆಸ್ ನಿಂದ ಉಚ್ಛಾಟನೆ ತೂಗುಗತ್ತಿ ನೇತಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular