ತುಮಕೂರು: ಪತಿ ಮೃತಪಟ್ಟ 20 ದಿನಕ್ಕೆ ಮತ್ತೊಬ್ಬನನ್ನು ಮದುವೆಯಾಗಿದ್ದ ಮಹಿಳೆ ಮತ್ತು ಆಕೆಯ ಹೊಸ ಗಂಡನನ್ನು ಬಂಧಿಸಲಾಗಿದೆ.
ಹೃದಯಾಘಾತದಿಂದ ಪತಿ ಮೃತಪಟ್ಟಿರುವುದಾಗಿ ಪತ್ನಿ ಪೊಲೀಸ್ ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ವರ್ ಜನವರಿ 30ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕತೆ ಕಟ್ಟಿದ್ದರು. ಅವರ ಸಾವಿನ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ, ಪರಮೇಶ್ವರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಅವರ ಸಹೋದರಿ ಹೆಬ್ಬೂರು ಠಾಣೆಗೆ ದೂರು ನೀಡಿದ್ದರು.
ಫೆಬ್ರವರಿ 26ರಂದು ದಾಸರಹಳ್ಳಿಯ ತೋಟದ ಮನೆಯ ಸಮೀಪ ಹೂತಿದ್ದ ಪರಮೇಶ್ವರ್ ಮೃತದೇಹ ಹೊರ ತೆಗೆದು ಪರೀಕ್ಷೆ ನಡೆಸಲಾಗಿತ್ತು.
ಪತಿ ನಿಧನರಾಗಿ ತಿಂಗಳ ಕಾರ್ಯ ನಡೆಯುವ ಮೊದಲೇ ಪತ್ನಿ ಆಶಾ, ಚಂದ್ರಪ್ಪ ಎಂಬುವರನ್ನು ಮದುವೆಯಾಗಿದ್ದಳು. ಇದು ಪರಮೇಶ್ವರ್ ಸಹೋದರಿಯರ ಅನುಮಾನಕ್ಕೆ ಕಾರಣವಾಗಿ ದೂರು ನೀಡಿದ್ದರು. ಪೊಲೀಸ್ ವಿಚಾರಣೆಯ ವೇಳೆ ತಾವೇ ಕೊಲೆ ಮಾಡಿರುವುದಾಗಿ ಪರಮೇಶ್ವರ್ ಹೇಳಿಕೊಂಡಿದ್ದಾನೆ. ಹೆಬ್ಬೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪತಿ ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ನಾಟಕವಾಡಿದ್ದ ಪತ್ನಿಯ ಬಣ್ಣ ಬಯಲಾಗಿದೆ.

