HomeKarnatakaBIG NEWS: ಕಾನ್ಸ್ಟೇಬಲ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ; ದೂರು ದಾಖಲಿಸಿದ ಯುವತಿ

BIG NEWS: ಕಾನ್ಸ್ಟೇಬಲ್ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ; ದೂರು ದಾಖಲಿಸಿದ ಯುವತಿ

ವಿಜಯಪುರ: ಪೊಲೀಸ್ ಕಾನ್ಸ್ಟೇಬಲ್ ಓರ್ವರ ವಿರುದ್ಧ ಯುವತಿಗೆ ಪ್ರೀತಿ-ಪ್ರೇಮದ ಹೆಸರಲ್ಲಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ ಸಿಬ್ಬಂದಿ ವಿನಾಯಕ್ ವಿರುದ್ಧ ಯುವತಿ ಆರೋಪ ಮಾಡಿ, ದೂರು ದಾಖಲಿಸಿದ್ದಾಳೆ. ಕಾನ್ಸ್ಟೇಬಲ್ ವಿನಾಯಕ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕವನ್ನೂ ಬಿಳಿಸಿದ್ದ. ಈಗ ಮದುವೆಗೆ ನಿರಾಕರಿಸುತ್ತಿರುವುದಾಗಿ ಯುವತಿ ದೂರು ನೀಡಿದ್ದಾಳೆ.

ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ವಿನಾಯಕ್ ವಿರುದ್ಧ ದೂರು ದಾಖಲಾಗಿದೆ. ಈ ನಡುವೆ ಕಾನ್ಸ್ಟೇಬಲ್ ವಿನಾಯಕ್ ಕಳೆದ 20 ದಿನಗಳಿಂದ ಕರ್ತವ್ಯಕ್ಕೂ ಹಾಜರಾಗದೇ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular