ವಿಜಯನಗರ: ಹೊಸ ವರ್ಷಾಚರಣೆಯ ದಿನದಂದೇ ರಾಜ್ಯದಲ್ಲಿ ಸಾಲು ಸಾಲು ಕೊಲೆ ಪ್ರಕರಣಗಳು ನಡೆದಿವೆ. ಪತ್ನಿ ಮೇಲಿನ ಅನುಮಾನಕ್ಕೆ ಹುಬ್ಬಳ್ಳಿಯಲ್ಲಿ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಬೆನ್ನಲ್ಲೇ ವಿಜಯನಗರ ಜಿಲ್ಲೆಯಲ್ಲಿಯೂ ಇಂತದ್ದೇ ಘಟನೆ ನಡೆದಿದೆ.
ಪತಿ-ಪತ್ನಿ ನಡುವಿನ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇತೆಯ ಅಮರಾವತಿ ನಿವಾಸಿ ಸೆಲ್ವಕುಮಾರ್ ಎಂಬಾತ ಪತ್ನಿ ಝಾನ್ಸಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ.
ಪ್ರಕರಣ ನಡೆದು ಕೇವಲ ನಾಲ್ಕು ಗಂಟೆಯಲ್ಲೇ ಆರೋಪಿ ಸೆಲ್ವಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

