HomeLatest Newsಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ: 10 ಎಸೆತಗಳಲ್ಲಿ 31 ರನ್ ಸಿಡಿಸಿ ಮೇಘಾಲಯ ಬೌಲರ್‌ಗಳಿಗೆ...

ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ: 10 ಎಸೆತಗಳಲ್ಲಿ 31 ರನ್ ಸಿಡಿಸಿ ಮೇಘಾಲಯ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ಬಿಹಾರದ ಪೋರ!

ನವದೆಹಲಿ: ಭಾರತೀಯ ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ 2025-26ರ ಆವೃತ್ತಿಯಲ್ಲಿ ಬಿಹಾರದ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿದ್ದಾರೆ. ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಮೇಘಾಲಯ ವಿರುದ್ಧ ನಡೆದ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ವೈಭವ್ ಸಿಡಿಲಬ್ಬರದ ಆರಂಭ ಪಡೆದರೂ, ದೊಡ್ಡ ಮೊತ್ತ ದಾಖಲಿಸುವಲ್ಲಿ ಸ್ವಲ್ಪದರಲ್ಲೇ ವಿಫಲರಾದರು.

ಕೇವಲ 10 ಎಸೆತಗಳಲ್ಲಿ 31 ರನ್! ಮೇಘಾಲಯ ನೀಡಿದ್ದ 218 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಿಹಾರ ತಂಡಕ್ಕೆ ವೈಭವ್ ಸ್ಫೋಟಕ ಆರಂಭ ನೀಡಿದರು. ಎದುರಿಸಿದ ಕೇವಲ 10 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಅದ್ಭುತ ಸಿಕ್ಸರ್ ನೆರವಿನಿಂದ 31 ರನ್ ಚಚ್ಚಿದರು. ಈ ವೇಳೆ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 310.00 ರಷ್ಟಿತ್ತು ಎಂಬುದು ವಿಶೇಷ. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಈ ಬಾಲಕನ ಬ್ಯಾಟಿಂಗ್ ಕಂಡು ಮಂತ್ರಮುಗ್ಧರಾದರು. ಆದರೆ, ಐದನೇ ಓವರ್‌ನ ಮೊದಲ ಎಸೆತದಲ್ಲಿ ಅಕಾಶ್ ಕುಮಾರ್ ಎಸೆತಕ್ಕೆ ಕ್ಯಾಚ್ ನೀಡಿ ವೈಭವ್ ಪೆವಿಲಿಯನ್ ಸೇರಿದರು.

ಐಪಿಎಲ್ ಇತಿಹಾಸದ ಕಿರಿಯ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಸೀಸನ್‌ನ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ಅಂದು ಅವರು ಕೇವಲ 36 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ‘ಲಿಸ್ಟ್ ಎ’ ಕ್ರಿಕೆಟ್‌ನಲ್ಲಿ ಭಾರತದ 4ನೇ ಅತಿ ವೇಗದ ಶತಕವನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಣಿಪುರ ವಿರುದ್ಧದ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ವೈಭವ್, ಈಗ ಮರಳಿದ ಮೊದಲ ಪಂದ್ಯದಲ್ಲೇ ತಮ್ಮ ಎಂದಿನ ಸ್ಫೋಟಕ ಶೈಲಿಯ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಚಲನ ಮೂಡಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ಯುವ ಆಟಗಾರನಿಂದ ಇನ್ನಷ್ಟು ದೊಡ್ಡ ಮೊತ್ತದ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular