HomeBeautyತುಳಸಿ ಹೀಗೆ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಹೀಗೆ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಉಪಯೋಗಕಾರಿ ಮನೆಮದ್ದು. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಅಂತಹ ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ.

*1 ಚಮಚ ಹಾಲಿನ ಕೆನೆಗೆ 1 ಚಮಚ ತುಳಸಿ ಪೇಸ್ಟ್ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ತುಳಸಿ ಪೇಸ್ಟ್ ಗೆ 1 ಚಮಚ ಮೊಸರು ಸೇರಿಸಿ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 5 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.

*ತುಳಸಿ ಪೇಸ್ಟ್ ಗೆ 1 ಚಿಟಿಕೆ ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಕ್ಲೀನ್ ಮಾಡಿ. ಇದರಿಂದ ಮುಖದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತದೆ.

*1 ಚಮಚ ತುಳಸಿ ಪೇಸ್ಟ್ ಗೆ 1 ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular