ನವದೆಹಲಿ: ಯುಪಿಐ ಮೂಲಕ ಹಣ ಪಾವತಿಸುವವರಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬರಲಿದೆ. 2026ರ ಅಕ್ಟೋಬರ್ 15ರಿಂದ ಕೆಲವು ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲಾಗುತ್ತದೆ. ಆದರೆ ಈ ಶುಲ್ಕವನ್ನು ಗ್ರಾಹಕರಿಂದ ಪ್ರತ್ಯೇಕವಾಗಿ ವಸೂಲಿ ಮಾಡಲು ಅವಕಾಶ ಇರುವುದಿಲ್ಲ.
ಹೊಸ ವ್ಯವಸ್ಥೆಯು ಎಲ್ಲ ಯುಪಿಐ ವಹಿವಾಟುಗಳಿಗೂ ಅನ್ವಯಿಸುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಗಳು ಎಂದಿನಂತೆ ಉಚಿತವಾಗಿರಲಿವೆ.
₹2,000ವರೆಗೆ UPI ಪಾವತಿ ಉಚಿತ
ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಸ್ವಂತ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾಯಿಸುವ P2P (Person-to-Person) ವಹಿವಾಟುಗಳಿಗೆ MDR ಇರುವುದಿಲ್ಲ.
ವ್ಯಾಪಾರಿಗಳಿಗೆ ಮಾಡುವ ₹2,000ವರೆಗಿನ P2M (Person-to-Merchant) ಪಾವತಿಗಳೂ ಉಚಿತವಾಗಿರುತ್ತವೆ. ಸರ್ಕಾರದ ಅಂದಾಜಿನ ಪ್ರಕಾರ, ಸುಮಾರು 96% P2M ಯುಪಿಐ ವಹಿವಾಟುಗಳು ಈ ಹೊಸ ಶುಲ್ಕ ವ್ಯವಸ್ಥೆಯಿಂದ ಹೊರಗಿರಲಿವೆ.
₹3,000 ಪಾವತಿಸಿದರೆ ಎಷ್ಟು MDR?
ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ 0.4% MDR ಅನ್ವಯಿಸುತ್ತದೆ.
ಉದಾಹರಣೆಗೆ:
₹3,000 ಪಾವತಿ: ₹12 MDR
₹50,000 ಪಾವತಿ: ₹200 MDR
₹75,000 ಪಾವತಿ: ₹300 MDR
₹1 ಲಕ್ಷ ಪಾವತಿ: 0.4% ಪ್ರಕಾರ ₹400 ಆಗಬೇಕಾದರೂ, ಗರಿಷ್ಠ ಮಿತಿಯಿಂದ ₹300 ಮಾತ್ರ ಅಂದರೆ, ಈ ವರ್ಗದ ವಹಿವಾಟುಗಳಿಗೆ MDR ಗರಿಷ್ಠ ₹300ಕ್ಕೆ ಸೀಮಿತವಾಗಿರುತ್ತದೆ.
ಇಲ್ಲ. MDR ವ್ಯಾಪಾರಿಯ ಮೇಲಿನ ಶುಲ್ಕವಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಯುಪಿಐ ಮೂಲಕ ಪಾವತಿ ಮಾಡುವ ವ್ಯಕ್ತಿಗೆ ಪ್ರತ್ಯೇಕವಾಗಿ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ.ಅದೇ ರೀತಿ, ಯುಪಿಐ ಆ್ಯಪ್‌ಗಳು ಈ ಪಾವತಿಗಳ ಮೇಲೆ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸುವಂತಿಲ್ಲ.
ಕೆಲವು ನಿರ್ದಿಷ್ಟ ವಲಯಗಳಿಗೆ ಪ್ರತ್ಯೇಕ MDR ವ್ಯವಸ್ಥೆ ಇರಲಿದೆ. ರೈಲ್ವೆ, ಇಂಧನ, ವಿಮೆ ಮತ್ತು ಟೆಲಿಕಾಂ ಕ್ಷೇತ್ರಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ 0.4% ಬದಲಾಗಿ ಪ್ರತಿ ವಹಿವಾಟಿಗೆ ₹5 MDR ಅನ್ವಯಿಸುವ ವ್ಯವಸ್ಥೆ ಇರಲಿದೆ.
https://x.com/PIBBengaluru/status/2099906944718999832
ಇನ್ನು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು, ಸೆಕ್ಯುರಿಟೀಸ್ ಮತ್ತು ಹೂಡಿಕೆ ವೇದಿಕೆಗಳಿಗೆ ಸಂಬಂಧಿಸಿದ ಯುಪಿಐ ಪಾವತಿಗಳಿಗೆ 0.02% MDR ವಿಧಿಸಲಾಗುತ್ತದೆ. ಇಲ್ಲಿಯೂ ಗರಿಷ್ಠ ಶುಲ್ಕ ₹300ಕ್ಕೆ ಮಿತಿಯಾಗಿರುತ್ತದೆ.
ಯುಪಿಐ QR ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ಪಾವತಿ ಸ್ವೀಕರಿಸುವ ಸಣ್ಣ ವ್ಯಾಪಾರಿಗಳನ್ನು P2PM ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಇಂತಹ ವ್ಯಾಪಾರಿಗಳಿಗೆ ಹೊಸ MDR ನಿಯಮ ಅನ್ವಯಿಸುವುದಿಲ್ಲ.
ಅಂದರೆ, ಒಬ್ಬ ಗ್ರಾಹಕರಿಂದ ₹2,000ಕ್ಕಿಂತ ಹೆಚ್ಚಿನ ಮೊತ್ತವನ್ನು ಸ್ವೀಕರಿಸಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಸಣ್ಣ ವ್ಯಾಪಾರಿಯ ಮೇಲೆ MDR ವಿಧಿಸಲಾಗುವುದಿಲ್ಲ.
UPI ಬಳಕೆದಾರರಿಗೆ ಏನು ಬದಲಾವಣೆ?
ಹೊಸ ವ್ಯವಸ್ಥೆಯಿಂದ ಸಾಮಾನ್ಯ ಯುಪಿಐ ಬಳಕೆದಾರರು ಪ್ರತಿ ಪಾವತಿಗೂ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ ಹಾಗೂ ₹2,000ವರೆಗಿನ ವ್ಯಾಪಾರಿ ಪಾವತಿಗಳು ಮುಂದುವರಿದಂತೆ ಉಚಿತವಾಗಿರುತ್ತವೆ.
ಹೆಚ್ಚಿನ ಮೊತ್ತದ ಕೆಲವು ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಮೂಲಕ ಯುಪಿಐ ವ್ಯವಸ್ಥೆಯ ಮೂಲಸೌಕರ್ಯ, ಸೈಬರ್ ಸುರಕ್ಷತೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸೇವೆಗಳ ನಿರ್ವಹಣೆಗೆ ಅಗತ್ಯವಿರುವ ಆದಾಯವನ್ನು ಒದಗಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.

