HomeKarnatakaBIG NEWS : ವಿಧವಾ ವೇತನ ಯೋಜನೆಯಡಿ ರಾಜ್ಯದ ವಿಧವೆಯರಿಗೆ ಸಿಗಲಿದೆ ಮಾಸಿಕ 800 ರೂ....

BIG NEWS : ವಿಧವಾ ವೇತನ ಯೋಜನೆಯಡಿ ರಾಜ್ಯದ ವಿಧವೆಯರಿಗೆ ಸಿಗಲಿದೆ ಮಾಸಿಕ 800 ರೂ. ಪಿಂಚಣಿ.ಹೀಗೆ ಅರ್ಜಿ ಸಲ್ಲಿಸಿ

ರಾಜ್ಯದ ನಿರ್ಗತಿಕ ವಿಧವೆಯರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಜಾರಿಯಲ್ಲಿಟ್ಟಿದೆ.ಬಡತನ ರೇಖೆಗಿಂತ ಕೆಳಗಿರುವ 18 ರಿಂದ 64 ವರ್ಷದೊಳಗಿನ ನಿರ್ಗತಿಕ ವಿಧವೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ, ಸರ್ಕಾರದ ಆದೇಶದ ಮೇರೆಗೆ 1ನೇ ಏಪ್ರಿಲ್ 1984 ರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಅರ್ಹರಿಗೆ ಪ್ರತಿ ತಿಂಗಳು ₹800 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ವಿಧವೆಯರಿಗೆ ಮಾಸಿಕ ₹2,000 ಪಿಂಚಣಿ ನೀಡುವ ಸೌಲಭ್ಯವಿದೆ.

ಅರ್ಹತಾ ಮಾನದಂಡಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ವಿಧವೆ: ಪತಿಯನ್ನು ಕಳೆದುಕೊಂಡ ಮಹಿಳೆ ಅಥವಾ ಕಾನೂನು ರೀತಿಯಲ್ಲಿ ಪತಿ ಮೃತಪಟ್ಟಿದ್ದಾರೆ ಎಂದು ಪರಿಗಣಿಸಲ್ಪಟ್ಟ ಮಹಿಳೆ.
  2. ಆದಾಯ ಮಿತಿ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯವು ರೂ. 32,000/- ಕ್ಕಿಂತ ಕಡಿಮೆ ಇರಬೇಕು.
  3. ಅರ್ಹತೆ ಮುಂದುವರಿಕೆ: ವಿಧವೆಯು ಮೃತಪಡುವವರೆಗೆ ಅಥವಾ ಮರು ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ನಿಗದಿತ ಆದಾಯಕ್ಕಿಂತ ಹೆಚ್ಚು ಆದಾಯ ಗಳಿಸುವವರೆಗೆ ಈ ವೇತನ ಪಡೆಯಬಹುದು.

ಸಲ್ಲಿಸಬೇಕಾದ ದಾಖಲೆಗಳು

  • ವಾಸಸ್ಥಳ ದೃಢೀಕರಣ ಪತ್ರ.
  • ವಯಸ್ಸಿನ ದೃಢೀಕರಣ ಪತ್ರ.
  • ಬ್ಯಾಂಕ್ ಮತ್ತು ಅಂಚೆ ಕಚೇರಿಯ ಖಾತೆ ವಿವರಗಳು.
  • ಆಧಾರ್ ಕಾರ್ಡ್.

ಪಿಂಚಣಿ ಮೊತ್ತ:

ಈ ಯೋಜನೆಯಡಿ ಪ್ರತಿ ತಿಂಗಳು ರೂ. 800 ಪಿಂಚಣಿಯನ್ನು ನೀಡಲಾಗುತ್ತದೆ.

ಅರ್ಜಿಸಲ್ಲಿಸುವುದು ಹೇಗೆ?

ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಾಪ್ತಿಗೆ ಬರುವ ಅಟಲ್ಜೀ ಜನಸ್ನೇಹಿ ಕೇಂದ್ರದ(ನಾಡಕಚೇರಿ) ಮೂಲಕ ಅರ್ಜಿ ಸಲ್ಲಿಸಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular