HomeEntertainment'ಲೋ ನವೀನಾ' ಚಿತ್ರದ ಮನಸೆಳೆಯುವ 'ಮಾತು ಕಥೆ' ಲಿರಿಕಲ್ ಹಾಡು ರಿಲೀಸ್

‘ಲೋ ನವೀನಾ’ ಚಿತ್ರದ ಮನಸೆಳೆಯುವ ‘ಮಾತು ಕಥೆ’ ಲಿರಿಕಲ್ ಹಾಡು ರಿಲೀಸ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ಸದಾ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಆ ಸಾಲಿಗೆ ಸೇರಲು ಸಜ್ಜಾಗುತ್ತಿದೆ ‘ಲೋ ನವೀನಾ’ ಎಂಬ ಹೊಸ ಸಿನಿಮಾ. ಸದ್ಯ ಈ ಚಿತ್ರದ ಬಹುನಿರೀಕ್ಷಿತ ಮಾತು ಕಥೆ ಲಿರಿಕಲ್ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಎನ್ ಎಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಅನಿವಾಸಿ ಭಾರತೀಯರಾದ ಕೀರ್ತಿ ಸ್ವಾಮಿ ವಾಷಿಂಗ್ಟನ್ ಡಿಸಿ ಅವರು ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಧನುರ್ಧಾರಿ ಪವನ್ ಅವರು ನಿರ್ದೇಶನ ಮಾಡಿದ್ದು, ವಿಶಿಷ್ಟ ಶೈಲಿಯಲ್ಲಿ ಕಥೆಯನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ.

ಈಗ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಸಾಂಗ್ ಕೇಳುಗರ ಮನ ಗೆಲ್ಲುತ್ತಿದೆ. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರು ಈ ಹಾಡಿಗೆ ಧ್ವನಿಯಾಗುವುದರ ಜೊತೆಗೆ ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಜನಪ್ರಿಯ ಸಾಹಿತಿ ಘೌಸ್ ಪೀರ್ ಅವರು ಬರೆದಿರುವ ಸಾಹಿತ್ಯ ಹಾಡಿನ ತೂಕವನ್ನು ಹೆಚ್ಚಿಸಿದೆ. ವಿನಾಯಕ್ ಆಚಾರ್ಯ ಅವರ ನೃತ್ಯ ನಿರ್ದೇಶನ ಈ ಹಾಡಿಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಂತ್ರಿಕವಾಗಿಯೂ ಈ ಸಿನಿಮಾ ಶ್ರೀಮಂತವಾಗಿ ಮೂಡಿಬರುತ್ತಿದೆ ಎಂಬುದಕ್ಕೆ ಈಗ ಬಿಡುಗಡೆಯಾಗಿರುವ ಹಾಡೇ ಸಾಕ್ಷಿಯಾಗಿದೆ. ರಿಷಿಕೇಶ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ನಿರ್ದೇಶಕ ಧನುರ್ಧಾರಿ ಪವನ್ ಹಾಗೂ ರಿಷಿಕೇಶ್ ಜೊತೆಯಾಗಿ ಹಾಡಿನ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಫೀನಿಕ್ಸ್ ಮೀಡಿಯಾ ಸಂಸ್ಥೆ ಡಿಐ ಜವಾಬ್ದಾರಿ ಹೊತ್ತಿದ್ದು, ಜೇಕಬ್ ಮ್ಯಾಥ್ಯೂ ಕಲರಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಒಟ್ಟಾರೆಯಾಗಿ ಲೋನವೀನಾ ಚಿತ್ರದ ಈ ಮೊದಲ ಹಾಡು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular