HomeEntertainmentಕೋಮಲ್ ಅಭಿನಯದ ‘ರಿಲಾಕ್ಸ್’ ಸಿನಿಮಾದಿಂದ ಬಿಗ್ ಅಪ್ಡೇಟ್: ನಾಳೆ ರಿಲೀಸ್ ಆಗಲಿದೆ ‘ಗುಡ್ ಮಾರ್ನಿಂಗ್ ಮೇಡಂ’...

ಕೋಮಲ್ ಅಭಿನಯದ ‘ರಿಲಾಕ್ಸ್’ ಸಿನಿಮಾದಿಂದ ಬಿಗ್ ಅಪ್ಡೇಟ್: ನಾಳೆ ರಿಲೀಸ್ ಆಗಲಿದೆ ‘ಗುಡ್ ಮಾರ್ನಿಂಗ್ ಮೇಡಂ’ ಸಾಂಗ್!

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ, ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅಭಿನಯದ ಮುಂಬರುವ ಬಹುನಿರೀಕ್ಷಿತ ‘ರಿಲಾಕ್ಸ್’ ಚಿತ್ರದ ಕಡೆಯಿಂದ ಬಿಗ್ ಅಪ್ಡೇಟ್ ಒಂದನ್ನು ಚಿತ್ರತಂಡ ನೀಡಿದೆ. ಈ ಸಿನಿಮಾದ ‘ಗುಡ್ ಮಾರ್ನಿಂಗ್ ಮೇಡಂ’ ಎಂಬ ಆಕರ್ಷಕ ವಿಡಿಯೋ ಹಾಡು ನಾಳೆ ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಶ್ರೀನಿವಾಸ ಮಂಡ್ಯ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಮಧು ಫಿಲ್ಮ್ ಸರ್ಕ್ಯೂಟ್ಸ್ ಬ್ಯಾನರ್ ಅಡಿಯಲ್ಲಿ ಮಧು ಮೋಹನ್ ಕೃಷ್ಣ ಅವರು ಬಂಡವಾಳ ಹೂಡಿದ್ದಾರೆ. ಕಥೆಯನ್ನು ತಮಿಳು ಸೆಲ್ವಂ ಬರೆದಿದ್ದು, ರಾಜಶೇಖರ್ ಕೆ.ಎಲ್. ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಕೋಮಲ್ ಕುಮಾರ್ ಅವರ ಜೊತೆಗೆ ಸೋನಾಲ್ ಮೊಂಥೇರೊ, ವಿನೋದ್ ಪ್ರಭಾಕರ್, ಅಚ್ಯುತ್ ಕುಮಾರ್, ನವೀನ್ ಪಡೀಲ್ ಹಾಗೂ ಅರುಣಾ ಬಾಲರಾಜ್ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣವಿದ್ದು, ಅರವಿಂದ್ ರಾಜ್ ಅವರ ಸಂಕಲನವಿದೆ. ಈ ಹಾಡಿನಲ್ಲಿ ಮಲಯಾಳಂ ಸಾಲುಗಳನ್ನು ಕೂಡ ಅಳವಡಿಸಲಾಗಿದ್ದು, ಸೂರಜ್ ಎಸ್. ವಾಸುದೇವ್ ಅವರು ಮಲಯಾಳಂ ಭಾಗಕ್ಕೆ ಸಂಗೀತ ಸಂಯೋಜಿಸಿ ಸಾಹಿತ್ಯ ಬರೆದಿದ್ದಾರೆ. ಸೌಂಡ್ ಎಫೆಕ್ಟ್ಸ್ ಹಾಗೂ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ನಂದು ಕೆ.ಜಿ.ಎಫ್ ವಹಿಸಿಕೊಂಡಿದ್ದಾರೆ. ನಾಳೆ ಬಿಡುಗಡೆಯಾಗಲಿರುವ ಈ ಹಾಡು ಕೇಳುಗರನ್ನು ರಂಜಿಸಲಿದೆ ಎಂಬ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular