HomeSportsUnder 19 WC Semifinal: ಕೇವಲ 41 ಓವರ್‌ಗಳಲ್ಲಿ 311 ರನ್ ಚೇಸ್ ಮಾಡಿ ಫೈನಲ್‌...

Under 19 WC Semifinal: ಕೇವಲ 41 ಓವರ್‌ಗಳಲ್ಲಿ 311 ರನ್ ಚೇಸ್ ಮಾಡಿ ಫೈನಲ್‌ ತಲುಪಿದ ಭಾರತ

ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿಂದು ( ಫೆಬ್ರವರಿ 4 ) ನಡೆದ ಅಂಡರ್ 19 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನದ ವಿರುದ್ಧ 7 ವಿಕೆಟ್‌ಗಳ ಗೆಲುವನ್ನು ಕಂಡು ಸತತ ಆರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್ ಬಾರಿಸಿದ್ದು, ಭಾರತಕ್ಕೆ 311 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ ಟಾಪ್ ಆರ್ಡರ್‌ನ ಅದ್ಭುತ ಆಟದ ನೆರವಿನಿಂದ 41.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 311 ರನ್ ಬಾರಿಸಿದೆ.

ಅಫ್ಘಾನಿಸ್ತಾನ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಒಸ್ಮಾನ್ ಸಾದತ್ ಹಾಗೂ ಖಲೀದ್ ಅಹ್ಮದ್‌ಝೈ ಅರ್ಧಶತಕದ ಜತೆಯಾಟವನ್ನಾಡಿದರು. ಒಸ್ಮಾನ್ ಸಾದತ್ 39 ರನ್ ಗಳಿಸಿದರೆ, ಖಲೀದ್ ಅಹ್ಮದ್‌ಝೈ 31 ರನ್ ಗಳಿಸಿದರು. ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ಫೈಸಲ್ ಶಿನೊಜಾದಾ ಹಾಗೂ ಉಜೈರುಲ್ಲಾ ನಿಯಾಜಿ ಶತಕದ ಜತೆಯಾಟವನ್ನಾಡಿ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ದು ವೈಯಕ್ತಿಕ ಶತಕಗಳನ್ನು ಸಹ ಬಾರಿಸಿದರು. ಫೈಸಲ್ ಶಿನೊಜಾದಾ 110 ರನ್ ಬಾರಿಸಿದರೆ, ಉಜೈರುಲ್ಲಾ ನಿಯಾಜಿ ಅಜೇಯ 101 ರನ್ ಬಾರಿಸಿದರು. ಇನ್ನುಳಿದಂತೆ ಅಝೀಝುಲ್ಲಾ ಮಿಯಾಖಿಲ್ 12 ರನ್ ಹಾಗೂ ಅಬ್ದುಲ್ ಅಜೀಜ್ ಅಜೇಯ 7 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಪರ ದೀಪೇಶ್ ದೇವೇಂದ್ರನ್ ಹಾಗೂ ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್: ಅಫ್ಘಾನಿಸ್ತಾನ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತದ ಪರ ಕಣಕ್ಕಿಳಿದ ಆರಂಭಿಕ ಆಟಗಾರರಾದ ಆರನ್ ಜಾರ್ಜ್ ಹಾಗೂ ವೈಭವ್ ಸೂರ್ಯವಂಶಿ 90 ರನ್‌ಗಳ ಜತೆಯಾಟವನ್ನಾಡಿ ಉತ್ತಮ ಆರಂಭ ಕಟ್ಟಿಕೊಟ್ಟರು. ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 68 ರನ್ ಬಾರಿಸಿದರು. ವೈಭವ್ ವಿಕೆಟ್ ಬೀಳುತ್ತಿದ್ದಂತೆ ಎರಡನೇ ವಿಕೆಟ್‌ಗೆ ಜತೆಯಾದ ಆರನ್ ಜಾರ್ಜ್ ಹಾಗೂ ನಾಯಕ ಆಯುಷ್ ಮ್ಹಾತ್ರೆ 114 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆಯುಷ್ ಮ್ಹಾತ್ರೆ 62 ರನ್ ಬಾರಿಸಿದರೆ, ಆರನ್ ಜಾರ್ಜ್ 115 ರನ್ ಬಾರಿಸಿದರು. ಇನ್ನುಳಿದಂತೆ ವಿಹಾನ್ ಮಲ್ಹೋತ್ರ ಅಜೇಯ 38 ರನ್ ಹಾಗೂ ವೇದಾಂತ್ ತ್ರಿವೇದಿ ಅಜೇಯ 5 ರನ್ ಗಳಿಸಿದರು.

ಅಘ್ಘಾನಿಸ್ತಾನದ ಪರ ನೂರಿಸ್ತಾನಿ ಒಮರ್‌ಝೈ ಎರಡು ವಿಕೆಟ್ ಹಾಗೂ ವಾಹಿದುಲ್ಲಾ ಝರ್ದಾನ್ ಒಂದು ವಿಕೆಟ್ ಪಡೆದರು.

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಫೆಬ್ರವರಿ 6ರಂದು ಹರಾರೆಯಲ್ಲಿ ನಡೆಯಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular