ಉತ್ತರಾಖಂಡ: ಒಂದು ಕ್ಷಣ ಎಲ್ಲವೂ ಮುಗಿಯಿತು ಎಂದೇ ಭಾವಿಸುವಂತಹ ಪರಿಸ್ಥಿತಿ. ಕಿರಿದಾದ ಘಾಟ್ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಆಳವಾದ ಕಣಿವೆಯತ್ತ ಹಿಂದಕ್ಕೆ ಉರುಳತೊಡಗಿತು. ಬಸ್ ಕಣಿವೆಗೆ ಬಿದ್ದಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು. ಆದರೆ, ಅದೇ ಕ್ಷಣದಲ್ಲಿ ಇಳಿಜಾರಿನಲ್ಲಿದ್ದ ಬೃಹತ್ ಮರವೊಂದು ಬಸ್‌ಗೆ ಆಸರೆಯಾಯಿತು. ಪರಿಣಾಮ, ಬಸ್ ಕಣಿವೆಯೊಳಗೆ ಸಂಪೂರ್ಣವಾಗಿ ಬೀಳದೆ ನೇತಾಡುವ ಸ್ಥಿತಿಯಲ್ಲಿ ನಿಂತಿತು. ಬಸ್‌ನಲ್ಲಿದ್ದ ಸುಮಾರು 30 ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲ್ಲಿ ನಡೆದಿದ್ದು ಘಟನೆ..? ಆಗಿದ್ದೇನು..?
ಉತ್ತರಾಖಂಡದ ಪೌರಿ ಗಢ್ವಾಲ್ ಜಿಲ್ಲೆಯ ದುಗ್ಗಡ್ಡಾ ಮತ್ತು ಗುಮ್ಖಾಲ್ ನಡುವಿನ ಘಾಟ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಢ್ವಾಲ್ ಮೋಟಾರ್ ಓನರ್ಸ್ ಯೂನಿಯನ್‌ಗೆ ಸೇರಿದ ಖಾಸಗಿ ಬಸ್ ಪತ್ಲಿಖಾಲ್ ಪ್ರದೇಶದ ಸಮೀಪ ಸಂಚರಿಸುತ್ತಿದ್ದಾಗ ಈ ಅವಘಡ ನಡೆದಿದೆ .
ಪೌರಿ–ಕೋಟ್‌ದ್ವಾರ್ ರಸ್ತೆಯಲ್ಲಿ ಸಾಗುತ್ತಿದ್ದ ಬಸ್‌ನ ಪ್ರೆಶರ್ ಪೈಪ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಏರು ರಸ್ತೆಯಲ್ಲಿ ಮುಂದೆ ಸಾಗಲು ಸಾಧ್ಯವಾಗದೆ ಬಸ್ ನಿಂತಿದೆ. ಬಳಿಕ ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಹಿಂದಕ್ಕೆ ಉರುಳುತ್ತಾ ರಸ್ತೆಯ ಪಕ್ಕದಲ್ಲಿದ್ದ ಆಳವಾದ ಕಣಿವೆಯತ್ತ ಜಾರಿದೆ. ಆಳವಾದ ಕಣಿವೆಗೆ ಉರುಳುವ ಅಪಾಯ ಎದುರಿಸಿದ್ದ ಬಸ್‌ನಲ್ಲಿದ್ದ ಸುಮಾರು 30 ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಕರಿಗೆ ಆಸರೆಯಾದ ಬೃಹತ್ ಮರ
ಘಾಟ್ ರಸ್ತೆಯಲ್ಲಿ ಸಾಗುತ್ತಿದ್ದ ಬಸ್‌ಗೆ ತಾಂತ್ರಿಕ ದೋಷ ಉಂಟಾದ ಬಳಿಕ ನಿಯಂತ್ರಣ ತಪ್ಪಿ ಹಿಂದಕ್ಕೆ ಉರುಳಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತು.ಕಣಿವೆಯತ್ತ ಜಾರುತ್ತಿದ್ದ ಬಸ್ ಮತ್ತಷ್ಟು ಕೆಳಕ್ಕೆ ಬೀಳದಂತೆ ರಸ್ತೆಯ ಪಕ್ಕದ ಮರವೊಂದು ತಡೆದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಕಣಿವೆಯತ್ತ ಜಾರುತ್ತಿದ್ದ ಬಸ್ ಕೆಳಕ್ಕೆ ಉರುಳುವ ಅಪಾಯ ಎದುರಿಸಿತ್ತು. ಆದರೆ, ಇಳಿಜಾರಿನಲ್ಲಿದ್ದ ಬೃಹತ್ ಮರವೊಂದು ಬಸ್ ಮತ್ತಷ್ಟು ಕೆಳಕ್ಕೆ ಬೀಳದಂತೆ ತಡೆದಿದೆ. ಮರಕ್ಕೆ ಸಿಲುಕಿದ ಬಸ್ ಕಣಿವೆಯ ಅಂಚಿನಲ್ಲಿ ನೇತಾಡುವ ಸ್ಥಿತಿಯಲ್ಲಿ ನಿಂತಿದೆ .
ಈ ಭಯಾನಕ ಸನ್ನಿವೇಶದ ನಡುವೆಯೂ ಬಸ್‌ನಲ್ಲಿದ್ದ ಸುಮಾರು 30 ಪ್ರಯಾಣಿಕರು ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ .ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ . ಕ್ಷಣಾರ್ಧದಲ್ಲಿ ಸಂಭವಿಸಿದ ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಒಂದು ಕ್ಷಣದ ತಾಂತ್ರಿಕ ದೋಷವೂ ಎಷ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಉತ್ತರಾಖಂಡದ ಈ ಘಟನೆ ನೆನಪಿಸಿದೆ. ಕುಟುಂಬದವರನ್ನು ಭೇಟಿಯಾಗಲು, ಕೆಲಸಕ್ಕೆ ತೆರಳಲು ಅಥವಾ ತಮ್ಮ ಊರಿಗೆ ಪ್ರಯಾಣಿಸಲು ಬಸ್ ಹತ್ತುವ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿ ಗಮ್ಯಸ್ಥಾನ ತಲುಪುವ ನಿರೀಕ್ಷೆಯಿರುತ್ತದೆ. ಆದರೆ, ವಾಹನದ ಪ್ರಮುಖ ಭಾಗಗಳಲ್ಲಿ ದೋಷ ಕಾಣಿಸಿಕೊಂಡರೆ ಪ್ರಯಾಣಿಕರ ಜೀವವೇ ಅಪಾಯಕ್ಕೆ ಸಿಲುಕಬಹುದು.
ವಿಶೇಷವಾಗಿ ಕಡಿದಾದ ಘಾಟ್ ರಸ್ತೆಗಳು, ತೀವ್ರ ಏರುಗಳು ಮತ್ತು ಅಪಾಯಕಾರಿ ತಿರುವುಗಳಲ್ಲಿ ಸಂಚರಿಸುವ ಬಸ್‌ಗಳ ಬ್ರೇಕ್, ಪ್ರೆಶರ್ ಪೈಪ್ ಹಾಗೂ ಇತರ ಯಾಂತ್ರಿಕ ಭಾಗಗಳ ಸ್ಥಿತಿಯನ್ನು ಮುಂಚಿತವಾಗಿಯೇ ಪರಿಶೀಲಿಸುವುದು ಅತ್ಯಗತ್ಯ. ವಾಹನಗಳ ನಿಯಮಿತ ತಪಾಸಣೆ ಮತ್ತು ಸಮಯೋಚಿತ ದುರಸ್ತಿ ಕೇವಲ ತಾಂತ್ರಿಕ ಕೆಲಸವಲ್ಲ; ಅದು ಚಾಲಕರು, ಪ್ರಯಾಣಿಕರು ಮತ್ತು ಅವರ ಕುಟುಂಬಗಳ ಸುರಕ್ಷತೆಗೆ ಸಂಬಂಧಿಸಿದ ಜವಾಬ್ದಾರಿಯಾಗಿದೆ.

