HomeLatest NewsT20 World Cup 2026: ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಸಿಕ್ಸರ್ ಸುರಿಮಳೆ; ದಕ್ಷಿಣ ಆಫ್ರಿಕಾಗೆ...

T20 World Cup 2026: ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಸಿಕ್ಸರ್ ಸುರಿಮಳೆ; ದಕ್ಷಿಣ ಆಫ್ರಿಕಾಗೆ ಕಠಿಣ ಗುರಿ

ಇದೇ 7ರಿಂದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುತ್ತಿವೆ. ಇಂದು ( ಫೆಬ್ರವರಿ 4 ) ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹತ್ತನೇ ಅಭ್ಯಾಸ ಪಂದ್ಯ ನಡೆದಿದ್ದು, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ಅಬ್ಬರ ಹಾಗೂ ಹಾರ್ದಿಕ್ ಪಾಂಡ್ಯ ರನ್ ಮಳೆಯ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 241 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ 80 ರನ್‌ಗಳ ಜತೆಯಾಟವನ್ನಾಡಿದರು. 5.4 ಓವರ್ ಸಮಯಕ್ಕೆ ಇಶಾನ್ ಕಿಶನ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 53 ರನ್ ಬಾರಿಸಿದ್ದಾಗ ರಿಟೈರ್ಡ್ ಹರ್ಟ್ ಆದರು. ಬೆನ್ನಲ್ಲೇ 24 ರನ್ ಕಲೆಹಾಕಿದ್ದ ಅಭಿಷೇಕ್ ಶರ್ಮಾ ಸಹ ರಿಟೈರ್ಡ್ ಹರ್ಟ್ ಆದರು. ಬಳಿಕ ತಿಲಕ್ ವರ್ಮಾ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 30 ರನ್ ಬಾರಿಸಿದರು. ಇನ್ನುಳಿದಂತೆ ರಿಂಕು ಸಿಂಗ್ 16 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಅಜೇಯ 35 ರನ್ ಬಾರಿಸಿದರು, ಯಾವುದೇ ರನ್ ಗಳಿಸದ ಹರ್ಷಿತ್ ರಾಣಾ ಅಜೇಯರಾಗಿ ಉಳಿದರು. ತಿಲಕ್ ವರ್ಮಾ ವಿಕೆಟ್ ಬಿದ್ದ ಬಳಿಕ ರನ್ ವೇಗದಲ್ಲಿ ಕುಸಿತ ಕಂಡಿದ್ದ ಭಾರತಕ್ಕೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 30 ರನ್ ಚಚ್ಚಿ ಬೃಹತ್ ಸುಧಾರಣೆ ತಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಯಾನ್‌ಸೆನ್, ಕಾರ್ಬಿನ್ ಬಾಷ್, ಅನ್ರಿಚ್ ನಾರ್ಕಿಯಾ ಹಾಗೂ ಮಫಾಕಾ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular