ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಂದ್ರಮಾನ ಯುಗಾದಿ 2026ರ ಅಂಗವಾಗಿ ವಿಶೇಷ ಬಸ್ ಸಂಚಾರವನ್ನು ಘೋಷಣೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ವೇಗದೂತ ಬಸ್‌ಗಳನ್ನು ಓಡಿಸಲಿದೆ.
ಚಂದ್ರಮಾನ ಯುಗಾದಿ ಅಂಗವಾಗಿ ಶ್ರೀಶೈಲಕ್ಕೆ ಅಥಣಿದಿಂದ ವೇಗದೂತ ವಿಶೇಷ ಬಸ್ ಓಡಿಸಲಿದೆ. ಈ ಬಸ್ 5-3-2026 ರಿಂದ 18-03-2026 ವರೆಗೆ ಸಂಚಾರ ನಡೆಸಲಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯವಿದೆ.
ಈ ಬಸ್ ಅಥಣಿಯನ್ನು ಬಿಡುವ ವೇಳೆ 17:30 ಮತ್ತು ಶ್ರೀಶೈಲಂ ತಲುಪುವ ವೇಳೆ 7.30. ಈ ಬಸ್ ವಿಜಯಪುರ, ಆತ್ಮಕುರಂ ಮೂಲಕ ಸಂಚಾರವನ್ನು ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಯಾಣ ದರ 1,110 ರೂ.ಗಳು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಪ್ರಯಾಣಿಕರ ವಿಶೇಷ ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8147485560, 9880018180 ಸಂಖ್ಯೆಗೆ ಸಂಪರ್ಕಿಸಬಹುದು.

