ತೆಲುಗು ಚಿತ್ರರಂಗದ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಅಧಿಕೃತವಾಗಿ ‘ದಂಪತಿ’ಗಳಾಗಿ ತಮ್ಮ ಹಳ್ಳಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಈಗ ವಿಜಯ್ ಅವರ ತವರು ಗ್ರಾಮವಾದ ತೆಲಂಗಾಣದ ತುಮ್ಮನಪೇಟೆಯಲ್ಲಿ ಬೀಡುಬಿಟ್ಟಿದೆ.
ವಿಜಯ್ ದೇವರಕೊಂಡ ತಮ್ಮ ಹುಟ್ಟೂರಿನಲ್ಲಿ ಸುಸಜ್ಜಿತವಾದ ಹೊಸ ಮನೆ ಕಟ್ಟಿಸಿದ್ದು, ಗೃಹಪ್ರವೇಶದ ನಂತರದ ಮೊದಲ ಸತ್ಯನಾರಾಯಣ ಪೂಜೆಯನ್ನು ನವದಂಪತಿಗಳು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಪೂಜೆಯ ಪ್ರತಿ ಫೋಟೋದಲ್ಲೂ ಈ ಜೋಡಿಯ ಕ್ಯೂಟ್ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು “ಮೇಡ್ ಫಾರ್ ಈಚ್ ಅದರ್” ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
https://www.instagram.com/reel/DVYBJglEySY/?utm_source=ig_web_copy_link&igsh=MzRlODBiNWFlZA==
ಪೂಜೆಯಲ್ಲಿ ಮಿಂಚಿದ ಟ್ರೆಡಿಷನಲ್ ಲುಕ್:
ವಿಜಯ್ ದೇವರಕೊಂಡ: ಹಳ್ಳಿ ಹೈದನಂತೆ ಕ್ಲಾಸಿಕ್ ಬೇಜ್ ಬಣ್ಣದ ಕುರ್ತಾದಲ್ಲಿ ವಿಜಯ್ ಕಂಗೊಳಿಸುತ್ತಿದ್ದರು.ಮಲೆನಾಡ ಸಿರಿಯಂತೆ ಆಫ್-ವೈಟ್ ಮತ್ತು ಆರೆಂಜ್ ಕಾಂಬಿನೇಷನ್ ರೇಷ್ಮೆ ಸೀರೆಯಲ್ಲಿ ಮಿಂಚಿದ ರಶ್ಮಿಕಾ, ಕೈತುಂಬಾ ಬಳೆ, ಟೆಂಪಲ್ ಜ್ಯುವೆಲ್ಲರಿ ಮತ್ತು ಮಲ್ಲಿಗೆ ಹೂವಿನ ಮುದ್ದಾದ ಅಲಂಕಾರದಲ್ಲಿ ‘ಪಕ್ಕಾ ಗೃಹಿಣಿ’ಯಂತೆ ಕಾಣುತ್ತಿದ್ದರು.
https://www.instagram.com/reel/DVX4MFsE3xr/?utm_source=ig_web_copy_link&igsh=MzRlODBiNWFlZA==
ಪೂಜೆಯ ನಂತರ ಕೇವಲ ಸೆಲೆಬ್ರಿಟಿಗಳಂತೆ ಕುಳಿತುಕೊಳ್ಳದ ಈ ಜೋಡಿ, ಗ್ರಾಮಸ್ಥರು ಮತ್ತು ನೆಂಟರಿಷ್ಟರಿಗೆ ಖುದ್ದಾಗಿ ನಿಂತು ಊಟ ಬಡಿಸಿದ್ದಾರೆ. ಹಳ್ಳಿಯ ಮಣ್ಣಿನ ಮಗನಾಗಿ ವಿಜಯ್ ಮತ್ತು ನಮ್ಮ ಹೆಮ್ಮೆಯ ಕನ್ನಡಿಗಿ ರಶ್ಮಿಕಾ ಅವರ ಈ ಸರಳತೆಗೆ ತುಮ್ಮನಪೇಟೆಯ ಜನ ಮನಸೋತಿದ್ದಾರೆ.ಈಗಾಗಲೇ ಈ ಜೋಡಿ ಹೈದರಾಬಾದ್‌ಗೆ ಮರಳಿದ್ದು, ಮಾರ್ಚ್ 4 ರಂದು ನಡೆಯಲಿರುವ ಅದ್ಧೂರಿ ಆರತಕ್ಷತೆಗೆ ಸಿದ್ಧತೆ ನಡೆಸಿದ್ದಾರೆ. ಸೌತ್ ಇಂಡಸ್ಟ್ರಿಯ ದಿಗ್ಗಜರು ಮತ್ತು ಬಾಲಿವುಡ್ ಸ್ಟಾರ್‌ಗಳು ಈ ಈವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಆದರೆ, ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಗೆಸ್ಟ್ ಲಿಸ್ಟ್ ಅನ್ನು ತುಂಬಾ ಕಿರಿದಾಗಿಸಲಾಗಿದೆ.
ಸುಮಾರು 8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ಜೋಡಿ, ಶೀಘ್ರದಲ್ಲೇ ತೆರೆಯ ಮೇಲೂ ಮೋಡಿ ಮಾಡಲಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ನಟಿಸುತ್ತಿದ್ದು, ಸೆಪ್ಟೆಂಬರ್ 11 ರಂದು ಈ ಸಿನಿಮಾ ತೆರೆಕಾಣಲಿದೆ.

