ತುಮಕೂರು: ಎರಡು ವರ್ಷದ ಕಂದಮ್ಮನ ಜೊತೆ ತಾಯಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಈ ಘಟನೆ ನಡೆದಿದೆ. ಗಂಗಾಮಣಿ(30), ಪ್ರೇಕ್ಷಾ (2) ಮೃತರು. ತಾಯಿ ಮಗು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಾಮಣಿ ಅವರಿಗೆ ಗರ್ಭಕೋಶದ ಸಮಸ್ಯೆಯಿತ್ತು. ಇದರಿಂದ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಗಂಗಾಮಣಿ ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು. ವೃತ್ತಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿರುವ ಯತೀಶ್, ಎಂದಿನಿಂತೆ ಕೆಲಸಕ್ಕೆ ತೆರಳಿದ್ದಾರೆ. ಇನ್ನು ಇಬ್ಬರು ಮಕ್ಕಳು ವಿನಯ್ (7) ಹಾಗೂ ರಕ್ಷಿತಾ (5) ಶಾಲೆಗೆ ಹೋಗಿದ್ದಾರೆ. ಆಗ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಪ್ರೇಕ್ಷಾ ಜೊತೆ ನೇಣಿಗೆ ಶರಣಾಗಿದ್ದಾಳೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

