ಬಾಲಿವುಡ್‌ನ ಬಹುಬೇಡಿಕೆಯ ನಟಿ ಆಲಿಯಾ ಭಟ್ ತಮ್ಮ ವಿಭಿನ್ನ ಫ್ಯಾಷನ್ ಶೈಲಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ ‘ಡೋಂಟ್ ಬಿ ಶೈ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ತೊಟ್ಟಿದ್ದ ಉಡುಪು ಎಲ್ಲರ ಗಮನ ಸೆಳೆದಿದೆ. ಸರಳತೆ ಮತ್ತು ಆಧುನಿಕತೆಯನ್ನು ಸಮ್ಮಿಲನಗೊಳಿಸಿದ ಅವರ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ಕಾರ್ಯಕ್ರಮಕ್ಕಾಗಿ ಆಲಿಯಾ ಭಟ್ ಮಿಂಟ್-ಗ್ರೀನ್ ಬಣ್ಣದ ಕೋರ್ಸೆಟ್ ಟಾಪ್ ಹಾಗೂ ಗಾಢ ಕಂದು ಬಣ್ಣದ ವೈಡ್-ಲೆಗ್ ಪ್ಯಾಂಟ್ ಧರಿಸಿದ್ದರು. ಬಣ್ಣಗಳ ಈ ವಿಶಿಷ್ಟ ಸಂಯೋಜನೆ ಅವರಿಗೆ ಅತ್ಯಂತ ಆಕರ್ಷಕ ನೋಟವನ್ನು ನೀಡಿತ್ತು.
ಲಂಡನ್ ಮೂಲದ ಪ್ರಸಿದ್ಧ ‘ಸಾನ್’ ಬ್ರಾಂಡ್‌ನ ಕಸ್ಟಮ್ ವಿನ್ಯಾಸದ ಈ ಕೋರ್ಸೆಟ್ ಟಾಪ್ ಬೆಲೆ ಅಂದಾಜು 985 ಡಾಲರ್ ಗಳಾಗಿದೆ. ಇದರ ಜೊತೆಗೆ ಅವರು ಧರಿಸಿದ್ದ ‘ಒನೊರಿ’ ಬ್ರಾಂಡ್‌ನ ‘ಸ್ಕಾರ್ಪಿಯೋ’ ಮಾದರಿಯ ಕಂದು ಬಣ್ಣದ ಫ್ಲೇರ್ಡ್ ಪ್ಯಾಂಟ್ ಬೆಲೆ ಸುಮಾರು 14333 ರೂಪಾಯಿ ಎಂದು ತಿಳಿದುಬಂದಿದೆ. ಈ ಉಡುಪಿಗೆ ಸರಿಹೊಂದುವಂತೆ ಅವರು ಅಕ್ವಾಜುರಾ ಬ್ರಾಂಡ್‌ನ ಹೀಲ್ಸ್ ಧರಿಸಿದ್ದರು.
ತಮ್ಮ ಒಟ್ಟಾರೆ ಲುಕ್ ಹೆಚ್ಚಿಸಲು ಆಲಿಯಾ ಅತ್ಯಂತ ಸರಳವಾದ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಹಗುರವಾದ ಕಿವಿಯೋಲೆಗಳು, ಚಿನ್ನದ ಉಂಗುರಗಳು ಮತ್ತು ಸರಳವಾದ ಬ್ರೇಸ್ಲೆಟ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಮುಕ್ತವಾಗಿ ಬಿಟ್ಟ ತಲೆಗೂದಲು ಹಾಗೂ ನ್ಯಾಚುರಲ್ ಮೇಕಪ್‌ನಲ್ಲಿ ಅವರು ದೇವತೆಯಂತೆ ಮಿಂಚುತ್ತಿದ್ದರು.
ಆಲಿಯಾ ಭಟ್ ಹಾಗೂ ಅವರ ಸಹೋದರಿ ಶಹೀನ್ ಭಟ್ ಅವರ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಡೋಂಟ್ ಬಿ ಶೈ’ ಒಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಈ ಚಿತ್ರವು ಸೆಪ್ಟೆಂಬರ್ 25 ರಂದು ಪ್ರೈಮ್ ವೀಡಿಯೋ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.

