HomeKarnatakaಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ 18 ತಿಂಗಳ ಕಾಲ ವಾಹನ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗದ...

ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ 18 ತಿಂಗಳ ಕಾಲ ವಾಹನ ಸಂಚಾರ ನಿರ್ಬಂಧ: ಪರ್ಯಾಯ ಮಾರ್ಗದ ಬಗ್ಗೆ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಹೆಬ್ಬಾಳ ಸಮೀಪ ಎಲಿವೇಟೇಡ್ ಕಾರಿಡಾರ್ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ 18 ತಿಂಗಳ ಕಾಲ ಎಲ್ಲಾ ವಿಧದ ಸಾರಿಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಏರ್ ಪೋರ್ಟ್ ಗೆ ಸಂಬಂಧಿಸಿದಂತೆ ಹೆಬ್ಬಾಳ ಸಮೀಪದ ಬಳ್ಳಾರಿ ರಸ್ತೆಯ ಯುಎಎಸ್‌ ಬಸ್‌ ನಿಲ್ದಾಣದಿಂದ ಮೇಖ್ರಿ ವೃತ್ತದವರೆಗೆ 4 ಪಥದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಲಿದ್ದು ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಿ ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳ ಮೂಲಕ ನಗರಕ್ಕೆ ಬರುವ ವಾಹನಗಳ ಸವಾರರು ಪರ್ಯಾಯ ರಸ್ತೆ ಮಾರ್ಗಗಳನ್ನು ಅನುಸರಿಸುವಂತೆ ಪೊಲೀಸರು ಕೋರಿದ್ದಾರೆ.

ಪರ್ಯಾಯ ಮಾರ್ಗ:

ಹೆಬ್ಬಾಳದಿಂದ ಏರ್‌ಪೋರ್ಟ್‌ಗೆ: ಓಲ್ಡ್… ಹೈಗ್ರೌಂಡ್‌ ಜಂಕ್ಷನ್‌ -ಕಲ್ಪನಾ ಜಂಕ್ಷನ್‌- ಓಲ್ಡ್‌ ಉದಯ ಟಿವಿ ಜಂಕ್ಷನ್‌- ಕಂಟೋನ್ಮೆಂಟ್‌ ರೈಲ್ವೆ ಸ್ಟೇಷನ್‌, ಟ್ಯಾನರಿ ರಸ್ತೆ- ನಾಗಾವರ ರಸ್ತೆ ಮೂಲಕ ಏರ್‌ಪೋರ್ಟ್‌ಗೆ ತೆರಳಬಹುದು.

ಯಶವಂತಪುರ ಕಡೆಯಿಂದ ಏರ್‌ಪೋರ್ಟ್‌ಗೆ: ಮತ್ತಿಕೆರೆ ರಸ್ತೆ ಮೂಲಕ ಬಿ.ಇ.ಎಲ್‌ ವೃತ್ತದಲ್ಲಿಬಲತಿರುವು ಪಡೆದು ರಿಂಗ್‌ ರೋಡ್‌ ಮೂಲಕ ಏರ್‌ಪೋರ್ಟ್‌ಗೆ ಹೋಗಬಹುದು.

ಏರ್‌ಪೋರ್ಟ್‌ನಿಂದ ನಗರಕ್ಕೆ ಬರುವ ವಾಹನಗಳು: ಹೆಬ್ಬಾಳದಲ್ಲಿಎಡತಿರುವು ಪಡೆದು ನಾಗಾವರ ಜಂಕ್ಷನ್‌ ಮುಖಾಂತರ ಬಲತಿರುವು ಪಡೆದು ಬಂಬು ಬಜಾರ್‌ ಕ್ಲೀನ್‌ ರಸ್ತೆ ಮುಖಾಂತರ ನಗರದ ಕಡೆಗೆ ಬರಬಹುದು.

ಹೆಬ್ಬಾಳದಲ್ಲಿ ಬಲತಿರುವು ಪಡೆದು ಹೆಬ್ಬಾಳ ರಿಂಗ್‌ ರಸ್ತೆ-ಕುವೆಂಪು ಸರ್ಕಲ್‌-ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿಎಡ ತಿರುವು ಪಡೆದು ಡಾ. ರಾಜ್‌ ಕುಮಾರ್‌ ರಸ್ತೆ ಮೂಲಕವೂ ನಗರಕ್ಕೆ ಸಂಚರಿಸಬಹುದು.

ಯಶವಂತಪುರ ಕಡೆಯಿಂದ ನಗರದ ಕೇಂದ್ರ ಭಾಗಕ್ಕೆ:

ಬಿಎಚ್‌ಇಎಲ್‌ ಜಂಕ್ಷನ್‌- ಮಾರಮ್ಮ ಸರ್ಕಲ್‌ ಬಳಿ ಬಲ ತಿರುವು ಪಡೆದು ಮಾರ್ಗೋಸಾ ರಸ್ತೆ ಮೂಲಕ ಬರಬಹುದು. ಅಷ್ಟೇ ಅಲ್ಲದೆ, ಹೆಬ್ಬಾಳ ಕಡೆಯಿಂದ ನಗರದ ಕಡೆಗೆ ಸಂಚರಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಇಳಿದ ನಂತರ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಮುಂಭಾಗ ಸರ್ವಿಸ್‌ ರಸ್ತೆಗೆ ಸೇರಿ ಸಿಬಿಐವರೆಗೂ ಸರ್ವಿಸ್‌ ರಸ್ತೆಯಲ್ಲಿಚಲಿಸಿ ನಂತರ ಬಳ್ಳಾರಿ ಮುಖ್ಯ ರಸ್ತೆಯ ಮುಖಾಂತರ ಬೆಂಗಳೂರು ನಗರದ ಕಡೆಗೆ ಸಂಚರಿಸುವುದು.

ಹೆಬ್ಬಾಳದಿಂದ ಆನಂದನಗರ ಮತ್ತು ಆರ್‌ಟಿ ನಗರ ಕಡೆಗೆ ಸಂಚರಿಸುವ ವಾಹನ ಸವಾರರು ಬ್ಯಾಪ್ಟಿಸ್ಟ್‌ ಆಸ್ಪತ್ರೆ ಮುಂಭಾಗ ಸರ್ವಿಸ್‌ ರಸ್ತೆಗೆ ಸೇರಿ ಆನಂದನಗರ ಕ್ರಾಸ್‌ ಮತ್ತು ಸಿಬಿಐ ಜಂಕ್ಷನ್‌ ಬಳಿ ಎಡತಿರುವು ಪಡೆದು ಜಯಮಹಲ್‌ ರಸ್ತೆ ಕಡೆಗೆ ಸಂಚರಿಸಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular