HomeLive Newsಮಹಾರಾಜ ಟ್ರೋಫಿ; ಇಂದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿ

ಮಹಾರಾಜ ಟ್ರೋಫಿ; ಇಂದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿ

ನಿನ್ನೆ ನಡೆದ ಮಹಾರಾಜ ಟ್ರೋಫಿಯಾ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಲಯನ್ಸ್ ಎದುರು 28 ರನ್ ಗಳಿಂದ ಜಯಭೇರಿ ಆಗಿದ್ದು, ಶಿವಮೊಗ್ಗ ಲಯನ್ಸ್ ಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಮೂಲಕ ಶಿವಮೊಗ್ಗ ಲಯನ್ಸ್ ಸತತ ಆರನೇ ಸೋಲು ಕಾಣುವ ಮೂಲಕ ಸೆಮಿ ಫೈನಲ್ ಆಸೆಯನ್ನು ನುಚ್ಚು ನೂರು ಮಾಡಿಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಡ್ರ್ಯಾಗನ್ಸ್ ಎದುರು ಕೇವಲ ಆರು ರನ್ ಗಳಿಂದ ರೋಚಕ ಜಯ ಸಾಧಿಸಿದೆ.

ಇಂದು ಬೆಂಗಳೂರು ಬ್ಲಾಸ್ಟರ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿಯಾಗಲಿದ್ದು, ಗೆದ್ದ ತಂಡ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ  ಜಿಗಿಯಲಿದೆ. ಹಾಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಬಹು ಮುಖ್ಯವಾಗಿದ್ದು, ಹೋರಾಡಲು  ಸಜ್ಜಾಗಿವೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ಮೈಸ್ಟಿಕ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಕಾದಾಡಲಿವೆ.

For Latest News Updates, Join Our Whatsapp Community🚩
RELATED ARTICLES

Most Popular