HomeEntertainment'ಧ್ರುವತಾರೆ' ಚಿತ್ರದ ಮತ್ತೊಂದು ಹಾಡು ರಿಲೀಸ್

‘ಧ್ರುವತಾರೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರತೀಕ್ ನಟಿಸಿ ನಿರ್ದೇಶಿಸಿರುವ ‘ಧ್ರುವತಾರೆ’ ಚಿತ್ರದ ”ಏಕಾಂಗಿ ಪಾಡು” ಎಂಬ ಲಿರಿಕಲ್ ಸಾಂಗ್ ಇತ್ತೀಚಿಗಷ್ಟೇ youtube ನಲ್ಲಿ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದು, ಇದೀಗ ”ಕನಸಲ್ಲೂ ನಾ” ಎಂಬ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಐಶ್ವರ್ಯ ಕಾರ್ತಿಕ್ ಧ್ವನಿಯಾಗಿರುವ ಈ ಹಾಡಿಗೆ ಸೂರಜ್ ಜೂಯಿಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ನಿರ್ದೇಶಕ ಪ್ರತೀಕ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ಪ್ರತೀಕ್ ಹಾಗೂ ಮೌಲ್ಯ ಸೇರಿದಂತೆ ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ , ಸಮಯ, ಸಂಗೀತ ನಾರಾಯಣ್ ಬಣ್ಣ ಹಚ್ಚಿದ್ದು, ಜಿಪಿ ಫಿಲಂ ಸ್ಟುಡಿಯೋ ಹಾಗೂ ಶಿವರುದ್ರ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪ್ರತೀಕ್ ಅವರ ಸಂಕಲನ, ಜೀಚನ್  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular