ತಿರುವನಂತಪುರಂ: ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಪರಿಣಾಮ ಇಂಧನ ಟ್ಯಾಂಕ್ ಹೊತ್ತಿ ಉರಿದಿದೆ. ಸುತ್ತಮುತ್ತ ಪ್ರದೇಶದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ. ಈ ನಡುವೆ ದುಬೈ ಏರ್ ಪೋರ್ಟ್ ನಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ದುಬೈಗೆ ತೆರಳುವ ಹಾಗೂ ದುಬೈನಿಂದ ಆಗಮಿಸಬೇಕಿದ್ದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಿರುವಂತಪುರಂನಿಂದ ದುಬೈಗೆ ಹೊರಟಿದ್ದ ವಿಮಾನವೊಂಡು ಅರ್ಧದಲ್ಲೇ ವಾಪಸ್ ಆಗಿರುವ ಘಟನೆ ನಡೆದಿದೆ.
353 ಪ್ರಯಾಣಿಕರು ಹಾಗೂ 19 ಸಿಬ್ಬಂದಿಗಳಿದ್ದ ಎಮಿರೇಟ್ಸ್ ವಿಮಾನ ಇಂದು ಬೆಳಿಗ್ಗೆ ತಿರುವನಂತಪುರಂ ವಿಮಾನ ನಿಲ್ದಾಣದಿಂದ ದುಬೈಗೆ ಹಾರಾಟ ನಡೆಸಿತ್ತು. ಆದರೆ ದುಬೈ ಏರ್ ಪೋರ್ಟ್ ನಲ್ಲಿ ಹಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಳಿಸಿರುವುದರಿಂದ ಮತ್ತೆ ತಿರುವಂತಪುರಂ ಏರ್ ಪೋರ್ಟ್ ಗೆ ವಿಮಾನ ವಾಪಸ್ ಆಗಿದೆ ಎಂದು ತಿಳಿದುಬಂದಿದೆ.

