ಬೆಂಗಳೂರು : ರಾಜ್ಯಾದ್ಯಂತ ಎದುರಾಗಿದ್ದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವಕ್ಕೆ ಸರ್ಕಾರ ಮದ್ದು ಅರೆದಿದ್ದು, ಹೋಟೆಲ್ ಮಾಲೀಕರಿಗೆ ಪ್ರತಿದಿನ 1,000 ಸಿಲಿಂಡರ್ ಒದಗಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಹೌದು. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ರಾಜ್ಯಾದ್ಯಂತ ಎದುರಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವಕ್ಕೆ ಕೊನೆಗೂ ಸರ್ಕಾರ ಮದ್ದು ಅರೆದಿದೆ. ಹೋಟೆಲ್ ಉದ್ಯಮ ಸ್ಥಗಿತಗೊಳ್ಳುವ ಭೀತಿ ಎದುರಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹೋಟೆಲ್‌ಗಳ ಸುಗಮ ಕಾರ್ಯನಿರ್ವಹಣೆಗೆ ಪ್ರತಿದಿನ 1,000 ಸಿಲಿಂಡರ್‌ಗಳನ್ನು ವಿಶೇಷವಾಗಿ ಪೂರೈಸಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಯ ಆತಂಕ ಸದ್ಯಕ್ಕೆ ದೂರಾದಂತಾಗಿದೆ.
ಕಳೆದ ಕೆಲವು ದಿನಗಳಿಂದ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಪ್ರತಿದಿನ 1,000 ವಾಣಿಜ್ಯ ಸಿಲಿಂಡರ್‌ಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ.ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ಹೋಟೆಲ್‌ಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ಗ್ಯಾಸ್ ಪೂರೈಕೆಯನ್ನು ಖಚಿತಪಡಿಸಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದರೂ, ಹೋಟೆಲ್ ಉದ್ಯಮ ಸ್ಥಗಿತಗೊಳ್ಳದಂತೆ ಈ ವಿಶೇಷ ಕೋಟಾವನ್ನು ಬಿಡುಗಡೆ ಮಾಡಲಾಗಿದೆ.
ಬೆಲೆ ಏರಿಕೆ ಭೀತಿ ಬೇಡ: ಸಿಲಿಂಡರ್ ಪೂರೈಕೆಯು ಸಕಾಲದಲ್ಲಿ ಆರಂಭವಾಗುವುದರಿಂದ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗುವ ಆತಂಕ ಸದ್ಯಕ್ಕೆ ದೂರಾದಂತಾಗಿದೆ.

