HomeLatest NewsALERT : ವಿಪರೀತ 'ಸೌದೆ ಒಲೆ' ಬಳಕೆಯಿಂದ  ಕ್ಯಾನ್ಸರ್ ಬರಬಹುದು : ವೈದ್ಯರ ಎಚ್ಚರಿಕೆ.!

ALERT : ವಿಪರೀತ ‘ಸೌದೆ ಒಲೆ’ ಬಳಕೆಯಿಂದ  ಕ್ಯಾನ್ಸರ್ ಬರಬಹುದು : ವೈದ್ಯರ ಎಚ್ಚರಿಕೆ.!

ಬೆಂಗಳೂರು : ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತೀವ್ರಗೊಂಡಿದೆ. ಇದರಿಂದಾಗಿ ಅನಿವಾರ್ಯವಾಗಿ ಜನರು ಮತ್ತು ಹೋಟೆಲ್‌ಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳ ಮೊರೆ ಹೋಗುತ್ತಿವೆ. ಆದರೆ, ಈ ಬದಲಾವಣೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹೌದು.   ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಅನಿವಾರ್ಯವಾಗಿ ಸೌದೆ ಒಲೆಗಳ ಮೊರೆ ಹೋಗುತ್ತಿರುವ ಜನಸಾಮಾನ್ಯರಿಗೆ ವೈದ್ಯಕೀಯ ಲೋಕ ಭೀತಿಯ ಸುದ್ದಿಯೊಂದನ್ನು ನೀಡಿದೆ.

ಸೌದೆ ಉರಿಸುವಾಗ ಹೊರಹೊಮ್ಮುವ ಹೊಗೆಯು ಕೇವಲ ಕಣ್ಣಿಗೆ ಕಿರಿಕಿರಿ ಉಂಟುಮಾಡುವುದಲ್ಲದೆ, ದೀರ್ಘಕಾಲದ ಬಳಕೆಯಿಂದ ಶ್ವಾಸಕೋಶದ ಕ್ಯಾನ್ಸರ್, ಟಿಬಿ (ಕ್ಷಯ), ಮತ್ತು ಅಸ್ತಮಾದಂತಹ ಮಾರಕ ಕಾಯಿಲೆಗಳಿಗೆ ನೇರ ಹಾದಿಯಾಗಲಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಈ ಹೊಗೆಯಲ್ಲಿರುವ ವಿಷಕಾರಿ ಕಾರ್ಬನ್ ಅಂಶಗಳು ಶ್ವಾಸಕೋಶದ ಜೀವಕೋಶಗಳಿಗೆ ಹಾನಿ ಉಂಟುಮಾಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಮುಚ್ಚಿದ ಕೋಣೆಯಲ್ಲಿ ಅಡುಗೆ ಮಾಡುವ ಮಹಿಳೆಯರು ಮತ್ತು ಮಕ್ಕಳು ಈ ಅಪಾಯಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರಕ ಕಾಯಿಲೆಗಳ ಅಪಾಯ: ಸೌದೆ ಉರಿಸಿದಾಗ ಹೊರಬರುವ ಹೊಗೆಯು ಶ್ವಾಸಕೋಶದ ಕ್ಯಾನ್ಸರ್ (Lung Cancer), ಟಿಬಿ (TB), ಅಸ್ತಮಾ ಮತ್ತು ಬ್ರೆಸ್ಟ್ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ವಿಷಕಾರಿ ಅಂಶಗಳು: ಸೌದೆಯ ಹೊಗೆಯಲ್ಲಿ ‘ಬೆಂಜೀನ್’ ಮತ್ತು ‘ಪಾಲಿ ಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್’ಗಳಂತಹ ವಿಷಕಾರಿ ಅನಿಲಗಳು ಇರುತ್ತವೆ. ಇವು ದೀರ್ಘಕಾಲದ ಬಳಕೆಯಿಂದ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತವೆ.

ದೀರ್ಘಕಾಲದ ಪರಿಣಾಮ: ಸೌದೆ ಒಲೆಯ ಬಳಕೆಯಿಂದ ತಕ್ಷಣಕ್ಕೆ ಯಾವುದೇ ದೊಡ್ಡ ತೊಂದರೆ ಕಾಣಿಸದಿದ್ದರೂ, ದೀರ್ಘಕಾಲದವರೆಗೆ ಈ ಹೊಗೆಯನ್ನು ಸೇವಿಸುವುದು ಜೀವಕ್ಕೆ ಕಂಟಕವಾಗಬಲ್ಲದು.

ವೈದ್ಯರ ಸಲಹೆ: ಅಡುಗೆ ಮಾಡಲು ಅನಿವಾರ್ಯವಾಗಿ ಸೌದೆ ಬಳಸುವವರು ಸಾಧ್ಯವಾದಷ್ಟು ಒಣಗಿದ ಸೌದೆಯನ್ನು ಬಳಸಬೇಕು. ಹಸಿ ಸೌದೆ ಬಳಸುವುದರಿಂದ ಹೊಗೆ ಅಧಿಕವಾಗಿ ಅಪಾಯ ಹೆಚ್ಚಾಗುತ್ತದೆ. ಆದಷ್ಟು ಗಾಳಿಯಾಡುವ ಜಾಗದಲ್ಲಿ ಅಡುಗೆ ಮಾಡುವುದು ಉತ್ತಮ.

ಸಿಲಿಂಡರ್ ಕೊರತೆಯಿಂದಾಗಿ ಜನರು ಹಳೆಯ ಪದ್ಧತಿಗೆ ಮರಳುತ್ತಿರುವುದು ಅನಿವಾರ್ಯವಾದರೂ, ಅದು ‘ಕ್ಯಾನ್ಸರ್‌ನ ತವರು ಮನೆ’ಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular