HomeLatest Newsಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ: ಸಿಎಂ ಆಗುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ: ಸಿಎಂ ಆಗುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಶಿವಮೊಗ್ಗ: ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ. ಪಕ್ಷ ಹೇಗೆ ನಿರ್ದೇಶನ ನೀಡುತ್ತೋ ಅದರಂತೆ ನಡೆದುಕೊಳ್ಳುವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶಿವಮೊಗ್ಗಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಆಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ನೋಡೋಣ ಏನಗುತ್ತೋ ಎಂದು ನಗುತ್ತಲೇ ಉತ್ತರಿಸಿದರು.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕುರಿತ ವಿಚಾರದ ಬಗ್ಗೆ ಮಾತನಾಡಿ, ಎರಡು ವರ್ಷ ಅಥವಾ ಮುಂದಿನ ಆದೇಶದವರೆಗೂ ಅಂತ ಇದೆ. ಈ ಬಗ್ಗೆ ಪಕ್ಷ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಹಳ ದಿನದ ನಂತರ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. 37 ವರ್ಷದ ನಂತರ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ‌ ನಡೆಯತ್ತಿದೆ. ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅಸೆಂಬ್ಲಿ ಹಾಗೂ ಕನಕೋತ್ಸವದ ಇದ್ದರೂ ತರಳಬಾಳು ಹುಣ್ಣಮೆ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಕನಕಪುರ ಕನಕೋತ್ಸವ ರಾಜ್ಯಕ್ಕೆ ಮಾದರಿಯಾದ ವಿಶೇಷ ಉತ್ಸವ. ಐದು ಗ್ಯಾರಂಟಿ, ಮನೆಗೊಂದು ರಂಗೋಲಿ ಎಂಬ ಧ್ಯೇಯದಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ 73 ಸಾವಿರ ಜನ ಭಾಗಿಯಾಗಿದ್ದಾರೆ. 11 ಸಾವಿರ ಜನ ಮುಸಲ್ಮಾನ್ ಬಾಂಧವರು ಮೆಹಂದಿ ಸ್ಪರ್ಧೆ ಭಾಗಿಯಾಗಿದ್ದರು. ಇದರ ಮಧ್ಯೆಯೂ ನಾನು ತರಳಬಾಳು ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದೆಂದು ಬಂದಿದ್ದೇನೆ ಎಂದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಕುರಿತು ಪಕ್ಷ ಒಂದು ತೀರ್ಮಾನದ ತೆಗೆದುಕೊಳ್ಳುತ್ತದೆ. ಕೆಲವರು ಸರ್ಕಾರದ ನಿರ್ದೇಶನದ ಮೇರೆಗೆ ನಾಮಪತ್ರ ವಾಪಾಸ್ ಪಡೆದಿರಬಹುದು ಎಂದರು.

 ಕೆ.ಜೆ. ಜಾರ್ಜ್ ಮುಖ್ಯಮಂತ್ರಿಯವರಿಗೆ ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾರ್ಜ್ ಸ್ವಾಭಿಮಾನಿ ರಾಜಕಾರಣಿಯಾಗಿದ್ದಾರೆ. ವಿರೋಧ ಪಕ್ಷದವರು ಬೇಕೆಂತಲೇ ಆರೋಪ ಮಾಡುತ್ತಿರುತ್ತಾರೆ. ಜಾರ್ಜ್ ಬಹಳ ಹಿರಿಯರು. ಬಹಳ ಜವಾಬ್ದಾರಿಯಿಂದ ಕೆಲಸ ಮಾಡುವವರು. ಮಾಧ್ಯಮದವರಿಂದಲೇ ನನಗೆ ಈ ಮಾಹಿತಿ ಬಂದಿದೆ. ವಿರೋಧ ಪಕ್ಷದವರು ಕೇವಲ ಆರೋಪ ಮಾಡುತ್ತಾರೆ. ಕಾರ್ಯಕರ್ತರು ಬಂದಾಗ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳೋದು ಸಹಜವಾಗಿರುತ್ತದೆ. ಯತೀಂದ್ರರವರು ಹಾಗೆ ಮಾಡುವವರಲ್ಲ, ಹಸ್ತಕ್ಷೇಪ ಮಾಡಿರುವುದಿಲ್ಲ. ರಾಜ್ಯ ಗುತ್ತಿಗೆ ಸಂಘದವರು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಯಾವ ಯಾವ ಸಮಯದಲ್ಲಿ ಏನು ಆರೋಪ ಮಾಡುತ್ತಿದ್ದಾರೆಂದು ತಿಳಿಯಲ್ಲ ಎಂದರು.

ನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ರೈತರ ಕಾಯ್ದೆ ಹೇಗೆ ವಾಪಾಸ್ ಪಡೆದರೋ ಅದೇ ರೀತಿ ಇದನ್ನು ವಾಪಾಸ್ ಪಡೆಯಬೇಕು. ನಮ್ಮ ನರೇಗಾ ಜನರಿಗೆ ಯಾವ ರೀತಿ ಅನುಕೂಲ ಆಗಿತ್ತು‌‌. ನಮ್ಮದೆ ಆದ ರೀತಿಯಲ್ಲಿ ನಾವು ಜಾಹೀರಾತು ನೀಡುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ನರೇಗಾದಲ್ಲಿ 7 ಸಾವಿರ ಕೋಟಿ ರೂ ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿತ್ತು. ಉದ್ಯೋಗ ನೀಡುವ ಕುರಿತು ಪಂಚಾಯತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ಅವರ ಹಕ್ಕನ್ನು ಕೇಂದ್ರ ಕಸಿದಿದೆ‌. ಅದನ್ನು ಕೇಂದ್ರ ತೀರ್ಮಾನ ಮಾಡುತ್ತಿದೆ ಎಂದ್ರೆ ಹೇಗೆ? ಮನ್ರೇಗಾದಲ್ಲಿ ವೈಯಕ್ತಿಕ ಕಾಮಗಾರಿ ಸಾಕಷ್ಟು ನಡೆಯುತ್ತಿದೆ‌‌. ನಮ್ಮ ಕ್ಷೇತ್ರದಲ್ಲಿ ನಾವು ಮನ್ರೇಗಾದಲ್ಲಿ ಸಾಕಷ್ಟು ಕಾಮಗಾರಿ ನಡೆಸಲಾಗಿದೆ. ಅದರ ಬಗ್ಗೆ ತನಿಖೆ ನಡೆಸಿದರು ಕೊನೆಗೆ ಅದರ ಬಗ್ಗೆ ನಮಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದರು. ಯೋಜನೆಯಲ್ಲಿ ಗಾಂಧಿಜೀ ಹೆಸರನ್ನು ತೆಗದು ಹಾಕಿದ್ದಾರೆ. ಇದರ ಕುರಿತು ಅಧಿವೇಶನದಲ್ಲಿ ಮನ್ರೇಗಾ ಜಾರಿ ಮಾಡಬೇಕೆಂದು ತೀರ್ಮಾನ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲದೆ ಪ್ರತಿ ಗ್ರಾ.ಪಂ.ಗೂ ಗಾಂಧಿಜೀ ಹೆಸರನ್ನು  ಹಾಕಬೇಕೆಂದು ಸೂಚಿಸಲಾಗಿದೆ ಎಂದರು.

ಕೇಂದ್ರದವರು ಕೃಷಿ ಕೆಲಸ ಇರುವಾಗ ಕೆಲಸ‌ ಕೊಡಲ್ಲ ಎಂದು ಹೇಳಿದ್ದಾರೆ. ಇದು ಸರಿ ಅಲ್ಲ. ಕೇಂದ್ರ ಸರ್ಕಾರ ಈಗ ನೀಡಿರುವ ಕಾನೂನು ಮಾಡಿರುವುದು ಸರಿಯಲ್ಲ, ಬಿಜೆಪಿ ಪಕ್ಷದವರು ಮೊದಲು ಗಾಂಧಿಜೀರನ್ನು ಕೊಂದರು. ಈಗ ಅವರು ಅವರ ಹೆಸರನ್ನು ತೆಗೆದು ಹಾಕಿದ್ದಾರೆ ಎಂದು ದೂರಿದರು.

ಮಹಾರಾಷ್ಟ್ರ ಗಡಿಯಲ್ಲಿ 400 ಕೋಟಿ ರೂ. ದರೋಡೆ ವಿಚಾರದ ಬಗ್ಗೆ ಮಾತನಾಡಿ, 400 ಕೋಟಿ ರೂ. ಕಳ್ಳತನ ಕುರಿತು ಕೇಂದ್ರದವರ ಬಳಿಯೇ ಸಿಬಿಐ ಇದೆ ತನಿಖೆ ಮಾಡಲಿ. ಸ್ಥಳೀಯ ಸಂಸ್ಥೆ ಚುನಾವಣೆ ನಾವು ನಡೆಸುತ್ತೇವೆ. ನಾಳೆ ನಾ‌ಡಿದ್ದು ಮೀಸಲಾತಿ ಕುರಿತು ಕೋರ್ಟ್ ಇದೆ. ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಾವು ಮಾಡುತ್ತೇವೆ ಎಂದರು.

ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕಾಗಿ ಶಿವಮೊಗ್ಗ ಹೆಲಿಪ್ಯಾಡ್ ಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಬಸವರಾಜ್ ಶಿವಗಂಗಾ.ಇದ್ದರು.

ಡಿಕೆಶಿ ಇಳಿಯುತ್ತಿದ್ದಂತೆ ಘೋಷಣೆ ಕೂಗಿದ ಬೆಂಬಲಿಗರು ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular