HomeIndiaದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯುಮಾಲಿನ್ಯ

ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯುಮಾಲಿನ್ಯ

ನವದೆಹಲಿ- ದೀಪಾವಳಿ ಹಬ್ಬದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿದೆ. ಪಟಾಕಿ ಸಿಡಿತದ ನಂತರ ಸೋಮವಾರ ಬೆಳಗ್ಗೆ ನಗರದಲ್ಲಿ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದೆ.

AQI.in ದತ್ತಾಂಶದ ಪ್ರಕಾರ, ಸೋಮವಾರ ಬೆಳಗ್ಗೆ 8.01ಕ್ಕೆ ದೆಹಲಿಯ AQI 663 ದಾಖಲಾಗಿದ್ದು, ಬಳಿಕ ಬೆಳಗ್ಗೆ 1.31ರ ವೇಳೆಗೆ ಗರಿಷ್ಠ 1,331ಕ್ಕೆ ತಲುಪಿದೆ. ಈ ಪ್ರಮಾಣವು ಕಳೆದ ವರ್ಷದ ದೀಪಾವಳಿ ನಂತರದ AQIಗೆ ಹೋಲಿಸಿದರೆ ಸುಮಾರು 69ರಷ್ಟು ಹೆಚ್ಚಾಗಿದೆ. 2025ರ ಅಕ್ಟೋಬರ್ 21ರಂದು ದೀಪಾವಳಿ ನಂತರದ ದಿನ AQI 393 ದಾಖಲಾಗಿತ್ತು.

ಭಾನುವಾರ ರಾತ್ರಿ 9.31ರ ವೇಳೆಗೆ AQI 681ರಷ್ಟಿದ್ದರೆ, ರಾತ್ರಿ 11ರ ವೇಳೆಗೆ ಅದು 1,153ಕ್ಕೆ ಏರಿಕೆಯಾಗಿತ್ತು. ಬಳಿಕ ಸೋಮವಾರ ಮುಂಜಾನೆ 1.31ರ ವೇಳೆಗೆ 1,331ರ ಗರಿಷ್ಠ ಮಟ್ಟ ತಲುಪಿದೆ. ಮುಂಜಾನೆಯ ನಂತರ ಮಾಲಿನ್ಯದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ ಗಾಳಿ ವಿಷಮಯವಾಗಿಯೇ ಉಳಿದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೀಪಾವಳಿಗೂ ಮುನ್ನವೇ ದೆಹಲಿಯ ವಾಯು ಗುಣಮಟ್ಟ ಕಳಪೆಯಾಗಿತ್ತು. ನವೆಂಬರ್ 8ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದಾಖಲಿಸಿದ 24 ಗಂಟೆಗಳ ಸರಾಸರಿ AQI 376, ಅಂದರೆ ‘ತುಂಬಾ ಕಳಪೆ’ ವರ್ಗದಲ್ಲಿತ್ತು. ನವೆಂಬರ್ 9ರಂದು ಗಾಳಿ ‘ಗಂಭೀರ’ ವರ್ಗಕ್ಕೆ ತಲುಪುವ ಸಾಧ್ಯತೆಯನ್ನೂ ಮುನ್ಸೂಚನೆ ನೀಡಲಾಗಿತ್ತು.

ವಾಹನಗಳ ಹೊಗೆ, ಕೈಗಾರಿಕಾ ಮಾಲಿನ್ಯ, ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ತ್ಯಾಜ್ಯ ಸುಡುವಿಕೆಯಿಂದ ಈಗಾಗಲೇ ಮಾಲಿನ್ಯಗೊಂಡಿದ್ದ ದೆಹಲಿಯ ವಾತಾವರಣಕ್ಕೆ ದೀಪಾವಳಿ ಪಟಾಕಿಗಳ ಹೊಗೆ ಮತ್ತಷ್ಟು ಸೇರ್ಪಡೆಯಾಗಿದೆ. ದುರ್ಬಲ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲಿ ಸಿಲುಕಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಇದರ ಜೊತೆಗೆ ನೆರೆಯ ರಾಜ್ಯಗಳಲ್ಲಿ ಬೆಳೆ ಅವಶೇಷ ಸುಡುವಿಕೆಯಿಂದ ಉಂಟಾಗುವ ಹೊಗೆಯೂ ದೆಹಲಿ-ಎನ್‌ಸಿಆರ್‌ನ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ನವೆಂಬರ್ 6ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ GRAP ಹಂತ-III ನಿರ್ಬಂಧಗಳನ್ನು ಜಾರಿಗೊಳಿಸಿದೆ.

ದೀಪಾವಳಿ ನಂತರವೂ ಮಾಲಿನ್ಯದ ಪ್ರಮಾಣ ತೀವ್ರವಾಗಿರುವುದರಿಂದ ದೆಹಲಿ ನಿವಾಸಿಗಳು ಮುಂದಿನ ದಿನಗಳಲ್ಲಿಯೂ ಕಲುಷಿತ ಗಾಳಿಯ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular