HomeEntertainment'ಸಂಜು' ಚಿತ್ರದ ವಿಡಿಯೋ ಹಾಡು ರಿಲೀಸ್

‘ಸಂಜು’ ಚಿತ್ರದ ವಿಡಿಯೋ ಹಾಡು ರಿಲೀಸ್

ಯತಿರಾಜ್ ನಿರ್ದೇಶನದ ಮನ್ವಿತ್ ಅಭಿನಯದ ‘ಸಂಜು’ ಚಿತ್ರದ ‘ಮಿಟಿಕ್ ಲಾಡಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದು, ಇದೀಗ ಇದರ ಸಂಪೂರ್ಣ ವಿಡಿಯೋ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ನವೀನ್ ಸಜ್ಜು ಈ ಹಾಡಿಗೆ ಧ್ವನಿಯಾಗಿದ್ದು, ನಿತಿನ್ ಶಿವರಾಂ ಸಂಗೀತ  ನೀಡಿದ್ದಾರೆ. ಇನ್ನುಳಿದಂತೆ ದಿನೇಶ್ ರಾಜ್ ಸಾಹಿತ್ಯವಿದೆ.

ಈ ಚಿತ್ರವನ್ನು ದಿಶಾ ಎಂಟರ್‌ಪ್ರೈಸಸ್ ಬ್ಯಾನರ್ ನಲ್ಲಿ ಸಂತೋಷ್ ನಿರ್ಮಾಣ ಮಾಡಿದ್ದು, ಮನ್ವಿತ್, ಶ್ರಾವ್ಯ, ಹಾಗೂ ಸಂಗೀತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ವಿದ್ಯ ನಾಗೇಶ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು  ಸಾಹಸ ನಿರ್ದೇಶನ, ಹಾಗೂ  ಮದನ್ ಹರಿಣಿ ಅವರ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular