HomeKarnatakaBIG NEWS: ಸಿಬಿಐ ಅಧಿಕಾರಿಗಳ ಹೆಸರಲ್ಲಿ ವಂಚನೆ: ಇಬ್ಬರು ಆರೋಪಿಗಳು ಅರೆಸ್ಟ್

BIG NEWS: ಸಿಬಿಐ ಅಧಿಕಾರಿಗಳ ಹೆಸರಲ್ಲಿ ವಂಚನೆ: ಇಬ್ಬರು ಆರೋಪಿಗಳು ಅರೆಸ್ಟ್

ಶಿವಮೊಗ್ಗ: ನಕಲಿ ಸಿಬಿಐ ಅಧಿಕಾರಿಗಳ ಹೆಸರಲ್ಲಿ ಲಕ್ಷ ಲಕ್ಷ ಹಣ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಹ್ಮದ್ (45) ಹಾಗೂ ಅಭಿಷೇಕ್ ಕುಮಾರ್ (27) ಬಂಧಿತರು. ಇಬ್ಬರೂ ಸಿಬಿಐ ಅಧಿಕರಿಗಳ ಹೆಸರು ಹೇಳಿ, ಶಿವಮೊಗ್ಗದ ಗೋಪಾಳ ಬಡಾವಣೆಯ ನಿವಾಸಿ ಆನಂದ್ ಎಂಬುವವರಿಗೆ ಕರೆ ಮಡಿ 41 ಲಕ್ಷ ಹಣ ವಂಚಿಸಿದ್ದರು.

ನಾವು ಸಿಬಿಐ ಅಧಿಕಾರಿಗಳು ಎಂದು ಕರೆ ಆನಂದ್ ಅವರನ್ನು ಹೆದರಿಸಿ, ನಿಮ್ಮ ಖಾತೆಯಿಂದ ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ. ಅದಕ್ಕೆ ಬ್ಯಾಂಕ್ ಖಾತೆ ಫ್ರೀಜ್ ಮಡಿದ್ದೇವೆ ಎಂದು ಹೇಳಿ ಆನಂದ್ ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ ಎಂದಿದ್ದಾರೆ. ನಿಮ್ಮನ್ನು ಬಂಧಿಸಬಾರದು ಎಂದರೆ 41 ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ನಕಲಿ ಅಧಿಕಾರಿಗಳ ಮಾತಿಗೆ ಕಂಗಾಲಾದ ಆನಂದ್ ಅವರು ಹೇಳಿದಂಎ ಹಣ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ದಿನಗಳ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲಿಸರು ಇಬ್ಬರು ಆರೋಪಿಗಖನ್ನು ಬಂಧಿಸಿದ್ದು, ಬಂಧಿತರಿಂದ 23.89 ಲಕ್ಷ ವಶಕ್ಕೆ ಪಡೆದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular