HomeEntertainment'ಕಾಗದ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಕಾಗದ’ ಚಿತ್ರದ ವಿಡಿಯೋ ಹಾಡು ರಿಲೀಸ್

 

ತನ್ನ ಟೀಸರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದ ರಂಜಿತ್ ನಿರ್ದೇಶನದ ‘ಕಾಗದ’ ಚಿತ್ರದ ವಿಡಿಯೋ ಹಾಡನ್ನು ಝಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಹೌದಾ ಇರಬಹುದಾ’ ಎಂಬ ಈ ಹಾಡಿಗೆ ಚೇತನ್ ನಾಯಕ್ ಧ್ವನಿಯಾಗಿದ್ದು, ಪ್ರದೀಪ್ ವರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಆದಿತ್ಯ ಕರೆಗೌಡ ಹಾಗೂ ಕಿರುತೆರೆ ನಟಿ ಅಂಕಿತ ಜೈರಾಮ್ ಮುಖ್ಯ ಭೂಮಿಕೆಯಲ್ಲಿದ್ದು, ನೇಹಾ ಪಾಟೀಲ್, ಬಾಲರಾಜವಾಡಿ, ಅಶ್ವಥ್ ನೀನಾಸಂ, ಶಿವ ಮಂಜು, ಗೌತಮ್ ರಾಜ್, ಸುರೇಶ್ ಬಾಬು, ತೇಜಶ್ರೀ ತೆರೆ ಹಂಚಿಕೊಂಡಿದ್ದಾರೆ. ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದು, ಪವನ್ ಗೌಡ ಸಂಕಲನ, ನಾಗರಾಜ್ ಮೂರ್ತಿ ಛಾಯಾಗ್ರಹಣ, ಅರುಣ್ ರೋಹಿತ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular