HomeInternationalಯುವತಿಯರಿಗೆ ಮಾತ್ರ ಜಿಮ್, 'ಆಂಟಿ'ಗಳಿಗಲ್ಲ; ಚರ್ಚೆ ಹುಟ್ಟುಹಾಕಿದ ಫಲಕ

ಯುವತಿಯರಿಗೆ ಮಾತ್ರ ಜಿಮ್, ‘ಆಂಟಿ’ಗಳಿಗಲ್ಲ; ಚರ್ಚೆ ಹುಟ್ಟುಹಾಕಿದ ಫಲಕ

ದೇಹ ತೂಕ ಹೆಚ್ಚಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ರೂಢಿ ಇದೆ. ಯುವಕರು- ಯುವತಿಯರು ಸೇರಿದಂತೆ ವಯಸ್ಸಾದವರೂ ಸಹ ಈ ರೂಢಿ ಬೆಳೆಸಿಕೊಂಡಿರುತ್ತಾರೆ.

ಆದ್ರೆ ದಕ್ಷಿಣ ಕೊರಿಯಾದ ಜಿಮ್ ವೊಂದು ಆಂಟಿಯರನ್ನು ನಿಷೇಧಿಸಿದೆ. ಜಿಮ್ “ಯುವತಿಯರಿಗೆ ಮಾತ್ರ” ಮತ್ತು “ಆಂಟಿಗಳಿಲ್ಲ” ಎಂದು ಮಧ್ಯ ವಯಸ್ಕ ಮಹಿಳೆಯರ ಮೇಲೆ ನಿಷೇಧ ಹೇರಲಾಗಿದೆ. ಮಧ್ಯ ವಯಸ್ಕ ಮಹಿಳೆಯರ ಮೇಲಿನ ಈ ನಿಷೇಧ ಮತ್ತೊಂದು ಚರ್ಚೆ ಹುಟ್ಟುಹಾಕಿದೆ.

ಜಿಮ್ ಪ್ರವೇಶದ್ವಾರದಲ್ಲಿ ಜಿಮ್ “ಯುವತಿಯರಿಗೆ ಮಾತ್ರ” ಮತ್ತು “ಆಂಟಿಗಳಿಲ್ಲ” ಎಂಬ ಪೋಸ್ಟ್ ಹಾಕಿದ್ದು ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗ್ನೇಯ ಏಷ್ಯಾ ಮತ್ತು ಭಾರತದ ಹೆಚ್ಚಿನ ದೇಶಗಳಿಗೆ ತಿಳಿದಿರುವಂತೆ ಆಂಟಿ ಎಂಬ ಪದವು ವಯಸ್ಸಾದ ಮಹಿಳೆ ಅಥವಾ ತಾಯಿಯ ವಯಸ್ಸಿನವಳು ಎಂಬುದನ್ನ ಸೂಚಿಸುತ್ತದೆ. ಈ ಪದವನ್ನು ಗೌರವ ರೂಪಕವಾಗಿ ಬಳಸಲಾಗಿದ್ದರೂ ಕಾಲಾನಂತರದಲ್ಲಿ ಇದನ್ನು ವಯಸ್ಸಾದ ಮಹಿಳೆ ಎಂದು ಅವಮಾನಕರ ರೀತಿಯಲ್ಲಿ ಬಳಸಲಾಗುತ್ತದೆ.

ದಕ್ಷಿಣ ಕೊರಿಯಾದಲ್ಲಿ, ‘ಆಂಟಿ’ ಎಂಬ ಪದವು ಎಲ್ಲಾ ನಕಾರಾತ್ಮಕ ಅರ್ಥಗಳೊಂದಿಗೆ ಮಧ್ಯವಯಸ್ಕ ಮಹಿಳೆಯರನ್ನು ಉಲ್ಲೇಖಿಸುತ್ತದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ ಇಂಚಿಯಾನ್‌ನಲ್ಲಿರುವ ಜಿಮ್ ನ ಪ್ರವೇಶದ್ವಾರದಲ್ಲಿ ಈ ಪದವನ್ನು ಬಳಸಲಾಗಿದ್ದು ಆಂಟಿಯರು ಜಿಮ್ ಪ್ರವೇಶಿಸುವಂತಿಲ್ಲ ಎಂದಿದೆ.

ಆದರೆ ಈ ಬಗ್ಗೆ ಮಾಲೀಕರು ಪ್ರತಿಕ್ರಿಯಿಸಿದ್ದು, ವಯಸ್ಸಾದ ಮಹಿಳೆಯರು ಜಿಮ್ ಗೆ ಬರುವ ಯುವತಿಯರಿಗೆ ಕಿರುಕುಳ ನೀಡಿದ್ದಾರೆ. ನೀವು ಮಕ್ಕಳನ್ನು ಹೊಂದಲು ಉತ್ತಮವಾಗಿರಬೇಕು ಎಂದು ವಯಸ್ಸಿನಲ್ಲಿರುವ ಯುವತಿಯರನ್ನು ಮಾತಿನ ಮೂಲಕ ಹೀಯಾಳಿಸುತ್ತಾರೆ. ಈ ವಯಸ್ಸಾದ ಮಹಿಳೆಯರು ತಮ್ಮ ಕೊಳಕು ಬಟ್ಟೆಯನ್ನು ಲಾಕರ್ ಕೋಣೆಯಲ್ಲಿ ಇರಿಸಲಾಗಿರುವ ವಾಷಿಂಗ್ ಮೆಷಿನ್‌ಗಳಲ್ಲಿ 2 ಗಂಟೆಗಳ ಕಾಲ ತೊಳೆಯುತ್ತಾರೆ . ಇದರಿಂದ ಜಿಮ್ ನ ನೀರಿನ ಬಿಲ್ ಹೆಚ್ಚಾಗಿದೆ. ಅವರು ಜಿಮ್ ನಲ್ಲಿದ್ದ ಟವೆಲ್‌ ಮತ್ತು ಗ್ರಾಹಕರಿಗೆ ಒದಗಿಸಿದ ಸೋಪ್ ಅನ್ನು ಸಹ ಕದ್ದಿದ್ದಾರೆ. ಮೌಲ್ಯಯುತ ಗ್ರಾಹಕರನ್ನು ಉಳಿಸಿಕೊಳ್ಳಲು ಅಂತಹ ಜನರನ್ನು ದೂರವಿಡಲು ಜಿಮ್ ಅಂತಿಮವಾಗಿ ನಿರ್ಧರಿಸಿದೆ ಎಂದಿದ್ದಾರೆ.

ಆಂಟಿಯರು ಜಿಮ್ ನ ತಮ್ಮದೇ ಜಗತ್ತೆಂದು ತಿಳಿದು ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಇದರಿಂದ 20-30 ವರ್ಷ ವಯಸ್ಸಿನ ಯುವತಿಯರು ಜಿಮ್ ತೊರೆದಿದ್ದಾರೆಂದರು.

For Latest News Updates, Join Our Whatsapp Community🚩
RELATED ARTICLES

Most Popular