ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮ್ಮ ಮೊದಲ ಕೌಟುಂಬಿಕ ಫೋಟೋದಲ್ಲಿ, ಈ ದಂಪತಿ ತಮ್ಮ ಮಗ ವಿಹಾನ್‌ನ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
“ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ ಇದು… ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಸಿಗಲಿ ಎಂದು ಹಾರೈಸುತ್ತೇವೆ – ವಿಕ್ಕಿ, ಕತ್ರಿನಾ ಮತ್ತು ವಿಹಾನ್,” ಎಂದು ಈ ಜೋಡಿ ಬರೆದುಕೊಂಡಿದೆ.
ವೈರಲ್ ಆಯ್ತು ಮುದ್ದಾದ ಕುಟುಂಬದ ಫೋಟೋ
ಮದುವೆಯಾದ ಐದು ವರ್ಷಗಳ ಬಳಿಕ ಕುಟುಂಬದ ಅಪರೂಪದ ಕ್ಷಣ ಹಂಚಿಕೊಂಡ ಬಾಲಿವುಡ್ ಜೋಡಿ ಹಂಚಿಕೊಂಡಿದ್ದು, ಮೊದಲ ಬಾರಿಗೆ ವಿಹಾನ್ ನ ಪೂರ್ಣ ಮುಖ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಅಭಿಮಾನಿಗಳಿಗೆ ವಿಶೇಷ ಸಿಹಿ ಸುದ್ದಿ
ಬಾಲಿವುಡ್‌ನ ಜನಪ್ರಿಯ ತಾರಾ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷ ಸಿಹಿಸುದ್ದಿ ನೀಡಿದ್ದಾರೆ. ತಮ್ಮ ಪುತ್ರ ವಿಹಾನ್‌ನ ಮುಖವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಉಡುಗೊರೆ ನೀಡಿದ್ದಾರೆ. ದಂಪತಿ ಹಂಚಿಕೊಂಡಿರುವ ಸುಂದರ ಕುಟುಂಬದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ, ವಿಕ್ಕಿ ಹಾಗೂ ಅವರ ಮುದ್ದಿನ ಪುತ್ರ ವಿಹಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹಳದಿ ಉಡುಪಿನಲ್ಲಿ ಕತ್ರಿನಾ, ಕ್ರೀಮ್ ಬಣ್ಣದ ಉಡುಪಿನಲ್ಲಿ ವಿಕ್ಕಿ
ದೀಪಾವಳಿ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಫೋಟೋಗೆ ಪೋಸ್ ನೀಡಿರುವ ದಂಪತಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕತ್ರಿನಾ ಕೈಫ್ ಕಸೂತಿ ಕೆಲಸವಿರುವ ಸುಂದರ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ವಿಕ್ಕಿ ಕೌಶಲ್ ಕ್ರೀಮ್ ಬಣ್ಣದ ಕಸೂತಿ ವಿನ್ಯಾಸದ ಶೇರ್ವಾನಿ ಧರಿಸಿದ್ದಾರೆ.
ಇವರಿಬ್ಬರ ಮಧ್ಯೆ ನಿಂತಿರುವ ಪುಟ್ಟ ವಿಹಾನ್ ಕೂಡ ತಂದೆ-ತಾಯಿಯ ಉಡುಪಿಗೆ ಹೊಂದಿಕೆಯಾಗುವ ಕ್ರೀಮ್ ಮತ್ತು ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಿದ್ದಾನೆ. ಫೋಟೋದಲ್ಲಿ ವಿಹಾನ್ ನಗುತ್ತಾ ಕೈ ಎತ್ತಿ ಅಭಿಮಾನಿಗಳ ಮನಗೆದ್ದಿದ್ದಾನೆ.
‘ನಮ್ಮ ಅತ್ಯಂತ ಪ್ರಕಾಶಮಾನವಾದ ದೀಪಾವಳಿ’
ಕುಟುಂಬದ ಫೋಟೋ ಹಂಚಿಕೊಂಡಿರುವ ಕತ್ರಿನಾ ಮತ್ತು ವಿಕ್ಕಿ, ‘ನಮ್ಮ ಅತ್ಯಂತ ಪ್ರಕಾಶಮಾನವಾದ ದೀಪಾವಳಿ. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷವನ್ನು ಹಾರೈಸುತ್ತೇವೆ’ ಎಂಬ ಅರ್ಥದ ಸಂದೇಶವನ್ನು ಬರೆದುಕೊಂಡಿದ್ದಾರೆ.
‘ವಿಕ್ಕಿ, ಕತ್ರಿನಾ ಮತ್ತು ವಿಹಾನ್’ ಎಂದು ತಮ್ಮ ಕುಟುಂಬದ ಪರವಾಗಿ ಶುಭಾಶಯ ತಿಳಿಸಿದ್ದಾರೆ.
2021ರಲ್ಲಿ ಮದುವೆ, 2025ರಲ್ಲಿ ಗಂಡು ಮಗುವಿನ ಆಗಮನ
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021ರ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಸುಮಾರು ನಾಲ್ಕು ವರ್ಷಗಳ ದಾಂಪತ್ಯದ ಬಳಿಕ 2025ರ ನವೆಂಬರ್ 7ರಂದು ಈ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟಿದ್ದರು.
ಈ ಹಿಂದೆ ಮಗುವಿನ ಕೈಯ ಚಿತ್ರವನ್ನು ಮಾತ್ರ ಹಂಚಿಕೊಂಡಿದ್ದ ದಂಪತಿ, ಮಗನ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಇದೀಗ ದೀಪಾವಳಿ ಸಂದರ್ಭದಲ್ಲಿ ಮೊದಲ ಬಾರಿಗೆ ಮಗನ ಮುಖವನ್ನು ಬಹಿರಂಗಪಡಿಸಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ
ದಂಪತಿ ಹಂಚಿಕೊಂಡಿರುವ ಫೋಟೋಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಪ್ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಪುಟ್ಟ ವಿಹಾನ್ ನ ಮುದ್ದಾದ ನಗು ಎಲ್ಲರ ಗಮನ ಸೆಳೆದಿದೆ.
ದೀಪಾವಳಿಯ ಬೆಳಕಿನ ಹಬ್ಬದ ಸಂದರ್ಭದಲ್ಲಿ ತಮ್ಮ ಕುಟುಂಬದ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಕತ್ರಿನಾ ಮತ್ತು ವಿಕ್ಕಿ ಅವರ ಈ ಪೋಸ್ಟ್ ವೈರಲ್ ಆಗಿದೆ.

